Select Your Language

Notifications

webdunia
webdunia
webdunia
webdunia

ಸರ್ಕಾರಿ ಶಾಲೆಯಲ್ಲಿ ಮೊಟ್ಟೆ ವಿತರಣೆಗೆ ಹೆದರಿ ಮಗನಿಗೆ ಟಿಸಿ ಕೊಡಿಸಿದ ತಂದೆ

ಸರ್ಕಾರಿ ಶಾಲೆಯಲ್ಲಿ ಮೊಟ್ಟೆ ವಿತರಣೆಗೆ ಹೆದರಿ ಮಗನಿಗೆ ಟಿಸಿ ಕೊಡಿಸಿದ ತಂದೆ
ಬೆಂಗಳೂರು , ಭಾನುವಾರ, 19 ಡಿಸೆಂಬರ್ 2021 (17:12 IST)
ರಾಜ್ಯದಲ್ಲಿ ಮೊಟ್ಟೆ ವಿತರಣೆಯ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಣೆ ಕುರಿತು ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗ್ತಿವೆ. ಈ ನಡುವೆ ಜಿಲ್ಲೆಯಲ್ಲಿ ಪೋಷಕರೊಬ್ಬರು ಮೊಟ್ಟೆ ಭಯಕ್ಕೆ ತಮ್ಮ ಮಗನನ್ನು ಸರ್ಕಾರಿ ಶಾಲೆ ಬಿಡಿಸಿ ಖಾಸಗಿ ಶಾಲೆಗೆ ಸೇರಿಸಿರುವ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ.
ರಾಷ್ಟ್ರೀಯ ಬಸವ ದಳದ ಮುಖಂಡ ವೀರಣ್ಣ ಕೊರ್ಲಹಳ್ಳಿ ಎಂಬುವರು ಸರ್ಕಾರಿ ಶಾಲೆಗೆ ತಮ್ಮ ಮಗನನ್ನು ಒಂದನೇ ತರಗತಿಗೆ ಆಡ್ಮಿಷನ್ ಮಾಡಿಸಿದ್ದರು. ಇತ್ತೀಚೆಗೆ ಸರ್ಕಾರ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ನೀಡುವುದಾಗಿ ತಿಳಿಸಿತ್ತು. ಇದಕ್ಕೆ ನನ್ನ ಧರ್ಮದ ವಿರೋಧವಿದೆ ಎಂದು ವೀರಣ್ಣ ಕೊರ್ಲಹಳ್ಳಿ ಶಾಲೆಯಿಂದಲೇ ಮಗನನ್ನು ವರ್ಗಾವಣೆ ಮಾಡಿಸಿದ್ದಾರೆ.
 
ದಿನ ನನ್ನ ಮಗ ಮೊಟ್ಟೆ ತಿನ್ನದೆ ಇರಬಹುದು. ಆದ್ರೆ ಬೇರೆ ಮಕ್ಕಳು ತಿನ್ನೋದನ್ನ ನೋಡಿ ಒಂದಲ್ಲ ಒಂದು ದಿನ ಅವನು ತಿನ್ನುತ್ತಾನೆ. ಇದೇ ಕಾರಣಕ್ಕೆ ಸರ್ಕಾರಿ ಶಾಲೆ ಬಿಡಿಸಿದ್ದೇನೆ ಎಂದು ಸ್ವತಃ ವೀರಣ್ಣ ಕೊರ್ಲಹಳ್ಳಿ ಅವರು ಮಗನ ಟಿಸಿ ಪಡೆದ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದಲ್ಲಿ ಕೊರೊನಾ ಸ್ಪೋಟ