Select Your Language

Notifications

webdunia
webdunia
webdunia
webdunia

ಕರ್ನಾಟಕದಲ್ಲಿ ಕೊರೊನಾ ಸ್ಪೋಟ

ಕರ್ನಾಟಕದಲ್ಲಿ ಕೊರೊನಾ ಸ್ಪೋಟ
ಬೆಂಗಳೂರು , ಭಾನುವಾರ, 19 ಡಿಸೆಂಬರ್ 2021 (16:48 IST)
ರಾಜ್ಯದಲ್ಲಿ ಓಮಿಕ್ರಾನ್​​ ​ ವೈರಸ್​ ಅಬ್ಬರ ಜೋರಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಓಮಿಕ್ರಾನ್​ ಬ್ಲಾಸ್ಟ್​ ಆಗಿದ್ದು, ಜಿಲ್ಲೆಯಲ್ಲಿ ಐವರು ವಿದ್ಯಾರ್ಥಿಗಳಿಗೆ ರೂಪಾಂತರಿ ವೈರಸ್ ಓಮಿಕ್ರಾನ್ ಅಟ್ಯಾಕ್​ ಆಗಿದೆ.ಬೆಂಗಳೂರು, ಬೆಳಗಾವಿ ಆಯ್ತು ಇದೀಗ ಕರಾವಳಿಗೆ ಎಂಟ್ರಿ ಕೊಟ್ಟಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನೇ ಓಮಿಕ್ರಾನ್​​ ಟಾರ್ಗೆಟ್​ ಮಾಡುತ್ತಿದೆ. ದಕ್ಷಿಣ ಕನ್ನಡದ ಐವರು ವಿದ್ಯಾರ್ಥಿಗಳಿಗೆ ಓಮಿಕ್ರಾನ್​​ ಸೋಂಕು ಧೃಢವಾಗಿದ್ದು. ಬಂಟ್ವಾಳದ ವಸತಿ ನಿಲಯದಲ್ಲಿದ್ದ 14 ವಿದ್ಯಾರ್ಥಿನಿಯರಿಗೆ ಕೊರೋನಾ ಪತ್ತೆಯಾಗಿದ್ದು,
 
14 ವಿದ್ಯಾರ್ಥಿನಿಯರ​​ ಪೈಕಿ ನಾಲ್ವರಿಗೆ ಓಮಿಕ್ರಾನ್​​ ದೃಢಪಟ್ಟಿದೆ, ಸೋಂಕಿತ ನಾಲ್ವರಿಗೂ ಯಾವುದೇ ಟ್ರಾವೆಲ್​ ಹಿಸ್ಟರಿ ಇಲ್ಲ. ಮತ್ತೊಂದು ಕಾಲೇಜಿನಲ್ಲಿ 19 ವಿದ್ಯಾರ್ಥಿನಿಯರಿಗೆ ಕೊರೋನಾ ಪತ್ತೆಯಾಗಿದೆ. 19 ಮಂದಿಯಲ್ಲಿ ಒಂದು ಓಮಿಕ್ರಾನ್​ ​​ ಕೇಸ್​​ ಪತ್ತೆಯಾಗಿದೆ. ಇಂಗ್ಲೆಂಡ್​ನಿಂದ ವಾಪಸ್ ಆಗಿದ್ದ ಯುವತಿಗೂ ಸೋಂಕು ಪತ್ತೆಯಾಗಿದೆ. ರಾಜ್ಯದಲ್ಲಿ ಓಮಿಕ್ರಾನ್​​ ​ ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆ ಆಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್​ ಟ್ವೀಟ್​ ಮೂಲಕ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜಧಾನಿಯಲ್ಲಿ ಸಂಗೊಳ್ಳಿ ಪುಥಳಿಗೆ ಮಸಿ 7 ಮಂದಿ ಬಂಧನ