Select Your Language

Notifications

webdunia
webdunia
webdunia
webdunia

ಚಂಡಮಾರುತಕ್ಕೆ ನಲುಗಿದ ಐದು ರಾಜ್ಯಗಳು!

ಚಂಡಮಾರುತಕ್ಕೆ ನಲುಗಿದ ಐದು ರಾಜ್ಯಗಳು!
ಅಮೇರಿಕಾ , ಭಾನುವಾರ, 12 ಡಿಸೆಂಬರ್ 2021 (12:23 IST)
ಅಮೇರಿಕಾದ ಐದು ರಾಜ್ಯಗಳಲ್ಲಿ ಚಂಡಮಾರುತ ಅಪ್ಪಳಿಸಿದ ಪರಿಣಾಮದಿಂದ ಇದುವರೆಗೆ 80ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ.

ಅಧ್ಯಕ್ಷ ಜೋ ಬಿಡೆನ್ ಇದನ್ನು ಇತಿಹಾಸದ ಅತಿದೊಡ್ಡ ಚಂಡಮಾರುತಗಳಲ್ಲಿ ಒಂದು ಎಂದು ವ್ಯಾಖ್ಯಾನಿಸಿದ್ದಾರೆ. ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಬಿಡೆನ್ ಮಾತನಾಡಿದ್ದು, ಇದೊಂದು ದುರಂತವಾಗಿದೆ. ಒಟ್ಟು ಎಷ್ಟು ಜನ ನಾಪತ್ತೆಯಾಗಿದ್ದಾರೆ,

ಹಾನಿ ಯಾವ ಪ್ರಮಾಣದಲ್ಲಾಗಿದೆ ಎಂಬುದರ ಬಗ್ಗೆ ಇನ್ನೂ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ ಎಂದಿದ್ದಾರೆ. ಮನೆಗಳು, ಕಛೇರಿ,ಕಾರ್ಖಾನೆಗಳು ಸೇರಿದಂತೆ ವಿವಿದೆಡೆ ಪರಿಹಾರ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಮೂಲಕ ಕಟ್ಟಡಗಳ ಅವಶೇಷಗಳಡಿ ಸಿಲುಕಿದವರನ್ನು ಹುಡುಕುವ ಪ್ರಯತ್ನಗಳು ನಿರಂತರವಾಗಿ ಸಾಗಿವೆ.

ಕೆಂಟಕಿಯೊಂದರಲ್ಲೇ 70ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ಅವರಲ್ಲಿ ಹೆಚ್ಚಿನವರು ಕ್ಯಾಂಡಲ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವವರಾಗಿದ್ದಾರೆ. ಇಲಿನಾಯ್ಸ್ನ ಆಮೆಜಾನ್ ವೇರ್ಹೌಸ್ನಲ್ಲಿ ಕನಿಷ್ಠ ಆರು ಜನರು ಮೃತಪಟ್ಟಿದ್ದಾರೆ. ಕ್ರಿಸ್ಮಸ್ ಕಾರಣದಿಂದ ಬಹುತೇಕರು ರಾತ್ರಿಪಾಳಿಯ ಕೆಲಸದಲ್ಲಿದ್ದವರಾಗಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಶಾಕಿಂಗ್: ಆಸ್ಪತ್ರೆ ನೆಪ, ಸಾಮೂಹಿಕ ಅತ್ಯಾಚಾರ!