Select Your Language

Notifications

webdunia
webdunia
webdunia
webdunia

ಜವಾದ್ ಚಂಡಮಾರುತ ಪ್ರಭಾವ: ಒಡಿಶಾದಲ್ಲಿ ಭಾರಿ ಮಳೆ

ಜವಾದ್ ಚಂಡಮಾರುತ ಪ್ರಭಾವ: ಒಡಿಶಾದಲ್ಲಿ ಭಾರಿ ಮಳೆ
bangalore , ಸೋಮವಾರ, 6 ಡಿಸೆಂಬರ್ 2021 (19:55 IST)
ಭುವನೇಶ್ವರ: - 'ಜವಾದ್' ಚಂಡಮಾರುತದ ಪ್ರಭಾವದಿಂದಾಗಿ ಒಡಿಶಾದ ಹಲವೆಡೆ ಭಾರಿ ಮಳೆಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಂಡಮಾರುತವು ಕಳೆದ 6 ಗಂಟೆಗಳಲ್ಲಿ ಬಂಗಾಳ ಕೊಲ್ಲಿಯಲ್ಲಿ ಉತ್ತರ-ಈಶಾನ್ಯಕ್ಕೆ ಗಂಟೆಗೆ 20 ಕಿ.ಮೀ ವೇಗದಲ್ಲಿ ಚಲಿಸಿದೆ.
ಗೋಪಾಲಪುರದಿಂದ 90 ಕಿ.ಮೀ, ಪುರಿಯಿಂದ 120 ಕಿ.ಮೀ, ಪರದೀಪ್‌ನಿಂದ 210 ಕಿ.ಮೀ. ದೂರದಲ್ಲಿ ಕೇಂದ್ರೀಕೃತವಾಗಿದೆ ಎಂದು ಭಾನುವಾರ ರಾತ್ರಿ 11.30ರ ಹವಾಮಾನ ವರದಿ ತಿಳಿಸಿದೆ.
ಗಾಂಜಮ್‌, ಖುದ್ರಾ, ಪುರಿ, ಖೇಂದ್ರಪರ, ಕೇಂದ್ರಪರಾ ಹಾಗೂ ಜಗತ್‌ಸಿಂಗ್‌ಪುರದಲ್ಲಿ ಭಾನುವಾರದಿಂದ ಭಾರಿ ಮಳೆಯಾಗುತ್ತಿದೆ.
ಕಾಳಿಕೋಟೆಯಲ್ಲಿ ದಾಖಲೆಯ 158 ಎಂ.ಎಂ. ಮಳೆಯಾಗಿದ್ದು, ನಯಾಗಡದಲ್ಲಿ 107.5 ಎಂ.ಎಂ.ಮಳೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಮಿಕ್ರಾನ್ ಭೀತಿ: ದೇಶದಲ್ಲಿ ಸೋಂಕಿನ ಸಂಖ್ಯೆ 21ಕ್ಕೆ ಏರಿಕೆ