ಹಿಜಾಬ್‌ನಿಂದ ಆರಂಭವಾದ ಧರ್ಮ ಸಂಘರ್ಷ ರಾಜ್ಯದಲ್ಲಿ ಮುಂದುವರೆಯುತ್ತಲೇ ಇದೆ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತಿದ್ದರು. ಇದನ್ನು ವಿರೋಧಿಸಿದ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿ ಪ್ರತಿಭಟಿಸಿದ್ದರು. ಈ ನಡುವೆ ಇದೀಗ ಸರ್ಕಾರಿ ನಿಗಮದಲ್ಲೂ ಧರ್ಮ ದಂಗಲ್ ಆರಂಭವಾಗಿದೆ. ಬಿಎಂಟಿಸಿ ಸಾರಿಗೆ ನಿಗಮ ನೌಕರರು ಸಮವಸ್ತ್ರ ನೀತಿ ಉಲ್ಲಂಘನೆ ಮಾಡಿದ್ದು, ಮುಸ್ಲಿಂ ನೌಕರರು ಟೋಪಿ, ಹಿಂದೂ ನೌಕರರಿಂದ ಕೇಸರಿ ಶಾಲು ಧರಿಸಿ ಕೆಲಸಕ್ಕೆ ಹಾಜರಾಗಿದ್ದಾರೆ. ಬಿಎಂಟಿಸಿ ನೌಕರರು ಕಳೆದ 1 ತಿಂಗಳಿಂದ ಕೇಸರಿ ಶಾಲು ಮತ್ತು ಟೋಪಿ ಹಾಕಿಕೊಂಡು ಕೆಲಸಕ್ಕೆ ಹಾಜರಾಗುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಟೋಪಿ ಕಳಚಲು ಕೇಸರಿ ಕಾರ್ಮಿಕರ ಸಂಘ ಎಂದು ನೌಕರರು ಸಂಘ ಮಾಡಿಕೊಂಡಿದ್ದಾರೆ. 1,500 ಸಿಬ್ಬಂದಿ ಕೇಸರಿ ಕಾರ್ಮಿಕರ ಸಂಘದ ಸದಸ್ಯತ್ವ ಹೊಂದಿದ್ದಾರೆ. ಟೋಪಿ ಕಳಚುವವರಗೂ ಕೇಸರಿ ಶಾಲು ಹಾಕುತ್ತೇವೆಂದು ಪಟ್ಟು ಹಿಡಿದಿದ್ದಾರೆ.