Select Your Language

Notifications

webdunia
webdunia
webdunia
webdunia

ಹೊಸ ಪ್ರಯೋಗಕ್ಕೆ ಮುಂದಾದ ಬಿಬಿಎಂಪಿ ಶಿಕ್ಷಣ ಇಲಾಖೆ

ಹೊಸ ಪ್ರಯೋಗಕ್ಕೆ ಮುಂದಾದ  ಬಿಬಿಎಂಪಿ ಶಿಕ್ಷಣ ಇಲಾಖೆ
bangalore , ಶನಿವಾರ, 11 ಜೂನ್ 2022 (19:16 IST)
ಬಿಬಿಎಂಪಿಯ ಶಿಕ್ಷಣ ಇಲಾಖೆಯಿಂದ ಹೊಸ ಪ್ರಯೋಗ ಒಂದಕ್ಕೆ ಕೈ ಹಾಕಿದ್ದು, ಕಲೆಕೆಯಿಂದ ಹಿಂದುಳಿದ ಬಡ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸಕ್ಕೆ ಹೊಸ ಯೋಜನೆ ರೂಪಿಸಲು ಮುಂದಾಗಿದೆ. ಇನ್ಮುಂದೆ ಬೆಳ್ಳಗ್ಗೆ ಶಾಲೆಗಳ ಜೊತೆಗೆ ರಾತ್ರಿ ಶಾಲೆಗಳ ಆರಂಭಕ್ಕೂ ಶಿಕ್ಷಣ ಇಲಾಖೆಯ ನೂತನ ಆಯುಕ್ತ ರಾಮ್ ಪ್ರಸಾದ್ ಮೋಹನ್‌ರಿಂದ ಮಹತ್ವದ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಈ ಕುರಿತಾಗಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಪಾಲಿಕೆ ಮುಂದಾಗಿದೆ. ಈ ಹಿಂದೆ ಬಳ್ಳಾರಿಯಲ್ಲಿ ಇದೇ ರೀತಿಯಾ ಯೋಜನೆ ತಂದು ಯಶಸ್ವಿಯಾಗಿದ್ದರು. ಅದೇ ರೀತಿ ನಗರದ 198 ವಾರ್ಡ್‌ಗಳಲ್ಲಿ ಪ್ರಯೋಗಿಕವಾಗಿ ವಿಸ್ತರಣೆ ಮಾಡಲು ಚಿಂತನೆ ಮಾಡಲಾಗುತ್ತಿದೆ. ಶಿಕ್ಷಣದಿಂದ ವಂಚಿತರಾಗಿ, ಮನೆ ಪಠ್ಯ ಪುಸ್ತಕ, ವಸತಿ ಇಲ್ಲದೇ ಹಿಂದುಳಿದ ಮಕ್ಕಳಿಗೆ ವಾರ್ಡ್ ಮಟ್ಟದಲ್ಲಿ ಶಾಲೆಗಳನ್ನ ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ನೀಡಲಾಗಿದೆ. ಇದರಿಂದ ವಂಚಿತರಾದ ಮುಕ್ಕಳಿಗೆ ಶಿಕ್ಷಣ ಸಿಗಲಿದ್ದು, ರಾತ್ರಿ ಶಾಲೆಗಳಲ್ಲಿ ಉಚಿತವಾಗಿ ಹಲವು ಸೌಲಭ್ಯಗಳನ್ನ ಬಿಬಿಎಂಪಿ ಒದಗಿಸುತ್ತಿದೆ. ಈಗಿರುವ ಸರ್ಕಾರಿ ಹಾಗೂ ಬಿಬಿಎಂಪಿ ಶಾಲೆಯ ಒಂದು ಕೊಠಡಿಯಲ್ಲಿ ಪಾಠ್ಯ ಪ್ರವಚನ,ಬರುವ ಮಕ್ಕಳಿಗೆ ಉಚಿತ ಪುಸ್ತಕ, ಬಟ್ಟೆ ಹಾಗೂ ರಾತ್ರಿ ವೇಳೆ ಇಸ್ಕಾನ್ ಊಟದ ಯೋಜನೆ ತಯಾರಿ,.ಶಾಲೆಯನ್ನ 6 ರಿಂದ 9 ರವರೆಗೆ ನುರಿತ ಶಿಕ್ಷಕರಿಂದ ಶಾಲೆ ನಡೆಸಲು ಚಿಂತನೆ ಮಾಡಲಾಗಿದೆ. ಅಂದುಕೊಂಡಂತೆ ಆದರೆ ಆಗಸ್ಟ್ ಮೊದಲವಾರದಲ್ಲಿ ಸಂಜೆಯ ಶಾಲೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿ ಶಾಲಾ ಕಾಲೇಜುಗಳಿಗೆ ಈಗ ಶಿಕ್ಷಕರ ನೇಮಕ ಮಾಡಲು ಸರ್ಕಾರ ಹಿಂದೇಟು