Publish Date: Mon, 06 Jun 2022 (20:24 IST)
Updated Date: Mon, 06 Jun 2022 (20:28 IST)
ಸಿಲಿಕಾನ್ ಸಿಟಿಯಲ್ಲಿ ರಸ್ತೆ ಗುಂಡಿ ಮುಚ್ಚುವ ವಿಚಾರಕ್ಕೆ ಸಂಬಂಧಪಟ್ಟಹಾಗೆ ಬಿಬಿಎಂಪಿ ವಿಶೇಷ ಆಯುಕ್ತ ಕೆ ಹರೀಶ್ ಕುಮಾರ್ ಹೇಳಿಕೆ ಕೊಟ್ಟಿದ್ದಾರೆ. ಸದ್ಯ 9,482 ರಸ್ತೆ ಗುಂಡಿಗಳನ್ನ ಮುಚ್ಚಿರುವ ಬಿಬಿಎಂಪಿ ಇನ್ನೂ 2020 ರಸ್ತೆ ಗುಂಡಿಗಳು ಬಾಕಿ ಉಳಿದುಕೊಂಡಿದೆ.ನಗರದಲ್ಲಿ ಮಳೆಯಾಗುತ್ತಿರುವುದರಿಂದ ಗುಂಡಿ ಮುಚ್ಚಲು ಸಾಧ್ಯವಾಗುತ್ತಿಲ್ಲ,ಆದಷ್ಟು ಬೇಗ ನಗರದಲ್ಲಿ ಗುಂಡಿ ಮುಕ್ತ ಮಾಡುತ್ತೇವೆ ಎಂದಿದ್ದಾರೆ.ಇನ್ನೂ ಚಾಮರಾಜಪೇಟೆಯಲ್ಲಿರೋ ಮೈದಾನ ವಿವಾದ ವಿಚಾರಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು ವರ್ಷದಲ್ಲಿ 2 ದಿನ ಹೊರತು ಪಡಿಸಿ ಇತರರಿಗೂ ಸಮಾರಂಭಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಪಾಲಿಕೆ ಅನುಮತಿ ಪಡೆದು ಸಮಾರಂಭ ನಡೆಸಲು ತೀರ್ಮಾನಿಸಲಾಗಿದೆ. ಮೈದಾನ ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತರ ಸುಪರ್ದಿಯಲ್ಲಿದೆ ಅನುಮತಿ ಪಡೆದು ಸಮಾರಂಭ ನಡೆಸಬಹುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ ಕೆ ಹರೀಶ್ ಕುಮಾರ್ ತಿಳಿಸಿದ್ರು.