Publish Date: Mon, 06 Jun 2022 (20:20 IST)
Updated Date: Mon, 06 Jun 2022 (20:23 IST)
ದೇಶದ ಅತ್ಯಂತ ಜನಪ್ರಿಯ ಆಹಾರ ವಿತರಣಾ ಅಪ್ಲಿಕೇಶನ್ ಳಲ್ಲಿ ಒಂದಾದ ಝೊಮಾಟೊ ವಿಭಿನ್ನ ಮಾರ್ಕೆಟಿಂಗ್ ಮೂಲಕ ಜನರನ್ನು ಸೆಳೀತಿದೆ. ಅದರಲ್ಲೂ ಆ್ಯಪ್ ಗಳ ಮೂಲಕ ಅತಿ ಹೆಚ್ಚು ಹಣವನ್ನು ಗಳಿಸುತ್ತಿರುವ ಫುಡ್ ಡೆಲಿವರಿ ಫ್ಲಾಟ್ ಫಾರಂ ಗಳು ಜನರನ್ನು ಸೆಳೆಯಲು ಹೊಸ ಹೊಸ ಟೆಕ್ನಿಕ್ ಯೂಸ್ ಮಾಡುತ್ತವೆ. ಫ್ರೀ ಡೆಲಿವರಿ, ಡಿಸ್ಕೌಂಟ್ ಕೂಪನ್ನ್ನು ಪರಿಚಯಿಸುತ್ತವೆ.
ಅದರಲ್ಲೂ ಸ್ವಿಗ್ಗೀ, ಝೊಮೆಟೋ ಗಳಂತೂ ನೀವು ಬೆಳಗ್ಗೆ ಏನ್ ತಿನ್ತೀರಾ, ಮಧ್ಯಾಹ್ನ ಏನ್ ತಿನ್ತೀರಾ, ರಾತ್ರಿಯ ಅಡುಗೆ ಆಗಿದ್ಯಾ ? ಬಿರಿಯಾನಿ ಟೇಸ್ಟ್ ಮಾಡಿದ್ದೀರಾ ಹೀಗೆ ನಾನಾ ನಮೂನೆಯ ಮೆಸೇಜ್ಗಳನ್ನು ಕಳುಹಿಸುತ್ತಲೇ ಇರುತ್ತಾರೆ. ಅದಕ್ಕಾಗಿ ಫ್ರೀ ಡೆಲಿವರಿ, 50 ಪರ್ಸೆಂಟ್ ಡಿಸ್ಕೌಂಟ್, ಸಂಡೇ ನಾನ್ ಕುಕ್ಕಿಂಗ್ ಡೇ ಹೀಗೆ ಹಲವು ಆಫರ್ಸ್ ಸುರಿಮಳೆ ಸುರಿಸ್ತಾರೆ. ಇದನ್ನು ನೋಡಿ ಜನ ಮಾತ್ರ ಫುಲ್ ಖುಷಿ ಯಾಗಿದ್ದಾರೆ.