Publish Date: Thu, 02 Jun 2022 (20:44 IST)
Updated Date: Thu, 02 Jun 2022 (20:46 IST)
ಸಿಲಿಕಾನ್ ಸಿಟಿಯಲ್ಲಿ ರಸ್ತೆ ಗುಂಡಿಗಳದ್ದೆ ದರ್ಬಾರ್, ಹೀಗಿರುವಾಗ ಬಿಬಿಎಂಪಿ ಗುಂಡಿ ಮುಚ್ಚಲು ಹರಸಾಹಸ ಪಡುತ್ತಿದೆ. ಈಗ ಎಚ್ಚೆತ್ತ ಬಿಬಿಎಂಪಿ ಗುಂಡಿ ಮುಚ್ಚಲು ತರಾತುರಿಯಲ್ಲಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದ್ದು, ಇಂದು ರಾತ್ರಿ 11.00 ರಿಂದ ರಸ್ತೆ ಗುಂಡಿ ಮುಚ್ಚುವ ಕಾರ್ಯವನ್ನು ಮುಖ್ಯ ಆಯುಕ್ತರು ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಇಂದು ರಾತ್ರಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.