Select Your Language

Notifications

webdunia
webdunia
webdunia
webdunia

ರಸ್ತೆ ಮಧ್ಯದಲ್ಲಿ ಕುಡುಕನ ರಂಪಾಟ

ರಸ್ತೆ ಮಧ್ಯದಲ್ಲಿ ಕುಡುಕನ ರಂಪಾಟ
bangalore , ಶನಿವಾರ, 30 ಏಪ್ರಿಲ್ 2022 (20:14 IST)
ಮದ್ಯಪಾನ ಹೆಚ್ಚಾದರೆ ತನ್ನ ಸುತ್ತಾ ಏನು ನಡೆಯುತ್ತಿದೆ, ತಾನು ಏನು ಮಾಡುತ್ತಿದ್ದೇನೆ ಎಂಬ ಅರಿವಿರುವುದಿಲ್ಲ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಕುಡಿದ ಮತ್ತಲ್ಲಿ ರಸ್ತೆ ಮದ್ಯೆ ಹೋಗಿ ಕುಳಿತಿದ್ದಾನೆ. ವಾಹನಗಳು ಒಂದರ ಹಿಂದೆ ಒಂದು ಸಾಲು ಗಟ್ಟಿ ಬರುತ್ತಿವೆ. ಆದರೆ ಇದನ್ನೆಲ್ಲಾ ಲೆಕ್ಕಕ್ಕೆ ತೆಗೆದುಕೊಳ್ಳದೆ ರಂಪಾಟ ಮಾಡಿದ್ದಾನೆ. ನಡು ರಸ್ತೆಯಲ್ಲಿ ಕುಳಿತ ವ್ಯಕ್ತಿ ಅಲ್ಲೆ ಉಪಹಾರವನ್ನೂ ಸೇವಿಸಿದ್ದಾನೆ. 60 ಫೀಟ್​ ರೋಡ್ಶಿ ವನಗರದಲ್ಲಿ ಈ ಘಟನೆ ಸಂಭವಿಸಿದೆ. ಯಾರಿಗೂ ಕೇರ್​ ಮಾಡದೆ ಮಧ್ಯರಸ್ತೆಯಲ್ಲಿ ಕುಳಿತು ತಿಂಡಿ ತಿಂದಿದ್ದಾನೆ. ವ್ಯಕ್ತಿಯ ರಂಪಾಟ ವಾಹನ ಸವಾರರಿಗೆ ಕಿರಿಕಿರಿಯಾಗಿದೆ. ಬರುವ ವಾಹನಗಳಿಗೆಲ್ಲ ಸೈಡ್​​ನಲ್ಲಿ ಹೋಗಿ ಎಂದಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೇ.1ಕ್ಕೆ ಸಿಜಿಎಸ್ ಕಾನ್​​​ಕ್ಲೇವ್​ ಶೃಂಗಸಭೆ