Select Your Language

Notifications

webdunia
webdunia
webdunia
webdunia

ಮೇ.1ಕ್ಕೆ ಸಿಜಿಎಸ್ ಕಾನ್​​​ಕ್ಲೇವ್​ ಶೃಂಗಸಭೆ

webdunia
bangalore , ಶನಿವಾರ, 30 ಏಪ್ರಿಲ್ 2022 (20:12 IST)
ಪ್ರತಿಷ್ಠಿತ ಸುರಾನಾ ಕಾಲೇಜಿನ 3 ನೇ ಆವೃತ್ತಿಯ ಸಿಜಿಎಸ್ ಕಾನ್ ಕ್ಲೇವ್ ನ – ವಾರ್ಷಿಕ ಪರಿವರ್ತನೆಯ ನಾಯಕತ್ವ ಶೃಂಗಸಭೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ 1 ಮೇ 2022 ರಂದು ಬೆಂಗಳೂರಿನ ಸೋಫಯಾ ಶಾಲೆಯ ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಡಾ. ಕಿರಣ್‌ ಬೇಡಿ, ಪದ್ಮಶ್ರೀ ಡಾ. ರಮಣ ರಾವ್‌, ಸಮರ್ಥನಂ ಸಂಸ್ಥೆಯ ಡಾ. ಮಹಾಂತೇಶ್‌ ಅವರಿಗೆ ಜಿ ಸಿ ಸುರಾನಾ ಲೀಡರ್‌ ಶಿಪ್‌ ಪ್ರಶಸ್ತಿ ನೀಡಿ ಗೌರವಿಸಾಗುವುದು ಎಂದು ಸುರಾನಾ ಎಜುಕೇಶನಲ್‌ ಇನ್ಸಿಟ್ಯೂಷನ್‌ಗಳ ವ್ಯವಸ್ಥಾಪಕ ಟ್ರಸ್ಟಿ ಡಾ. ಅರ್ಚನಾ ಸುರಾನಾ ತಿಳಿಸಿದರು. ಒಂದೇ ಸೂರಿನಡಿ ತರುವುದು ಮತ್ತು ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಶಿಕ್ಷಣ ತಜ್ಞರಿಗೆ ಸಂಬಂಧಿಸಿದ ವಿಚಾರಗಳ ಕುರಿತು ವಿಚಾರ ಮಂಥನ ಮಾಡುವ ವೇದಿಕೆಯಾಗಲಿದೆ ಎಂದು ಹೇಳಿದರು. ಈ ಸಮಾರಂಭಕ್ಕೆ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ, ಐಟಿ & ಬಿಟಿ, ವಿಜ್ಞಾನ & ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಕ್ಷೇಪಾರ್ಹ ಪೋಸ್ಟ್​ ಹಿನ್ನೆಲೆ ರವೀಂದ್ರ ಬಂಧನ