Select Your Language

Notifications

webdunia
webdunia
webdunia
webdunia

ಬಿಎಂಟಿಸಿ ಯಿಂದ ನಗರದ ಜನತೆಗೆ ನೂತನ ತಂತ್ರಜ್ಞಾನದ ಪರಿಚಯ

ಬಿಎಂಟಿಸಿ ಯಿಂದ ನಗರದ ಜನತೆಗೆ ನೂತನ ತಂತ್ರಜ್ಞಾನದ ಪರಿಚಯ
bangalore , ಬುಧವಾರ, 6 ಏಪ್ರಿಲ್ 2022 (18:33 IST)
ನಗರದ ಖಾಸಗಿ ಸಂಸ್ಥೆ ಟುಮೊಕ್‌ ಕಂಪೆನಿಯ ಸಹಭಾಗಿತ್ವದಲ್ಲಿ ಮೊಬೈಲ್‌ ಆ್ಯಪ್‌ ಪರಿಚಯಿಸುತ್ತಿರುವ ಬಿಎಂಟಿಸಿ, ಸ್ಮಾರ್ಟ್‌ಫೋನ್‌ಗಳಲ್ಲೇ ಪಾಸ್​ ವ್ಯವಸ್ಥೆ ಮಾಡಿದೆ.
 
ಬಿಎಂಟಿಸಿ (BMTC) ಪ್ರಯಾಣಿಕರು ಇನ್ಮುಂದೆ ಪಾಸ್​ ಪಡೆಯಲು ಬಸ್ ನಿಲ್ದಾಣಗಳಲ್ಲಿ ಕ್ಯೂ ನಿಲ್ಲೋದು ತಪ್ಪಲಿದೆ. ಇನ್ನು ಮುಂದೆ ಪಾಸ್‌ ಖರೀದಿಸುವ ಬದಲಾಗಿ ಮೊಬೈಲ್‌ ಫೋನ್‌ನ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ (QR code scan) ಮಾಡಿ ಪ್ರಯಾಣಿಸುವುದಕ್ಕೆ ಅವಕಾಶ ಕಲ್ಪಿಸಿದೆ. ಬಿಎಂಟಿಸಿ ನಗರದ ಪ್ರಯಾಣಿಕರಿಗಾಗಿ ನೂತನ ತಂತ್ರಜ್ಞಾನ (New Technology) ಪರಿಚಯಿಸಿದೆ. ನಗರದ ಖಾಸಗಿ ಸಂಸ್ಥೆ ಟುಮೊಕ್‌ ಕಂಪೆನಿಯ ಸಹಭಾಗಿತ್ವದಲ್ಲಿ ಮೊಬೈಲ್‌ ಆ್ಯಪ್ ‌(Mobile App) ಪರಿಚಯಿಸುತ್ತಿರುವ ಬಿಎಂಟಿಸಿ, ಸ್ಮಾರ್ಟ್‌ಫೋನ್‌ಗಳಲ್ಲೇ (Smartphone) ಟುಮೊಕ್‌ ಸಂಸ್ಥೆಯ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ದಿನದ ಮತ್ತು ವಾರದ ಹಾಗೂ ಮಾಸಿಕ ಪಾಸುಗಳನ್ನು ಪಡೆಯಲು ಅವಕಾಶ ನೀಡಿದೆ.
 
ಮೊಬೈಲ್‌ ಆ್ಯಪ್‌ನನ್ನು ಬಸ್‌ನ ನಿರ್ವಾಹಕರ ಬಳಿಯ ಎಲೆಕ್ಟ್ರಾನಿಕ್‌ ಟಿಕೆಟ್‌ ಮಿಷನ್‌(ETM)ನಲ್ಲಿ ಸ್ಕ್ಯಾನ್‌ ಮಾಡಿ ಪ್ರಯಾಣಿಬಹುದಾಗಿದೆ. ಇದರಿಂದ ಬಸ್‌ ನಿಲ್ದಾಣಗಳಿಗೆ ಭೇಟಿ ನೀಡಿ ಪಾಸ್‌ ಖರೀದಿಸುವ ಅಗತ್ಯವಿಲ್ಲವಾಗಲಿದೆ. ಇಷ್ಟು ದಿನ ಪೇಪರ್​ ರೂಪದಲ್ಲಿ ಬಿಎಂಟಿಸಿ ಬಸ್​ ನೀಡಲಾಗ್ತಿತ್ತು. ಇದೀಗ ಪಾಸ್​ ನನ್ನು ಮೊಬೈಲ್​ನಲ್ಲೇ ಕ್ಯೂಆರ್​ ಕೋಡ್​ ಸ್ಕ್ಯಾನ್​ ಮಾಡ್ಬಹುದು.
 
 
ಬಸ್​ಗಳಲ್ಲಿ ಕ್ಯೂಆರ್​ ಕೋಡ್​ ವ್ಯವಸ್ಥೆ ಹೇಗಿದೆ?
 
 
ವೊಲ್ವೋ ಬಸ್‌ಗಳ ನಿರ್ವಾಹಕರಿಗೆ ಇಟಿಎಂ ಮಿಷನ್‌ಗಳಿರಲಿದ್ದು, ಅದರಲ್ಲಿ ಮೊಬೈಲ್‌ನಲ್ಲಿನ ಕ್ಯೂಆರ್‌ಕೋಡ್‌ ಸ್ಕ್ಯಾನ್‌(QRCode Scan) ಮಾಡಬಹುದಾಗಿದೆ. ಆದರೆ, ಸಾಮಾನ್ಯ ಬಸ್‌ಗಳಲ್ಲಿ ನಿರ್ವಾಹಕರ ಬಳಿ ಇರುವ ಕ್ಯುಆರ್‌ ಕೋಡ್‌ ಅನ್ನು ಸ್ಕ್ಯಾನ್‌ ಮಾಡಿ ಪ್ರಯಾಣಿಸಬಹುದಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆರಂಭದಲ್ಲಿ ಎಲ್ಲ ವೋಲ್ವೋ ಬಸ್‌ಗಳು ಹಾಗೂ ಸುಮಾರು 200 ಸಾಮಾನ್ಯ ಬಸ್‌ಗಳಲ್ಲಿ ಪರಿಚಯಿಸಲು ಉದ್ದೇಶಿಸಲಾಗಿದೆ ಎಂದು ಎಂದು ಬಿಎಂಟಿಸಿ ನಿರ್ದೇಶಕ(ಐಟಿ) ಸೂರ್ಯಸೇನ್‌ ಮಾಹಿತಿ ನೀಡಿದರು.
 
ಪಾಸ್​ಗಾಗಿ ಕ್ಯೂನಲ್ಲಿ ನಿಲ್ಲೋದು ತಪ್ಪುತ್ತೆ
 
 
ಈ ವ್ಯವಸ್ಥೆಯಿಂದ ಮುಖ್ಯವಾಗಿ ಪ್ರಯಾಣಿಕರಿಗೆ ಸಾಕಷ್ಟುಸಮಯ ಉಳಿತಾಯ ಆಗಲಿದೆ. ಪ್ರತಿ ತಿಂಗಳು ಸರದಿಯಲ್ಲಿ ನಿಂತು ಪಾಸು ಪಡೆಯುವ ಗೋಜು ತಪ್ಪಲಿದೆ. ನಗದು ವಹಿವಾಟು ಇರುವುದಿಲ್ಲ. ಬಸ್‌ಗಳಲ್ಲಿ ಚಿಲ್ಲರೆ ಸಮಸ್ಯೆ ಇರುವುದಿಲ್ಲ. ಭವಿಷ್ಯದಲ್ಲಿ ಟಿಕೆಟ್‌ ವಿತರಣಾ ವ್ಯವಸ್ಥೆಗೂ ಇದು ವಿಸ್ತರಣೆಯಾದರೆ, ಆದಾಯ ಸೋರಿಕೆಗೆ ಬ್ರೇಕ್‌ ಬೀಳಲಿದೆ ಎಂದು ಬಿಎಂಟಿಸಿ ನಿರ್ದೇಶಕ (ಐಟಿ) ಸೂರ್ಯಸೇನ್‌ ಮಾಹಿತಿ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ರಾಪ್ತ ಮಗಳ ಮೇಲೆ ನಿರಂತರ ಅತ್ಯಾಚಾರ; ಪಾಪಿ ತಂದೆಗೆ 25 ವರ್ಷ ಜೈಲು ಶಿಕ್ಷೆ ಘೋಷಣೆ