Select Your Language

Notifications

webdunia
webdunia
webdunia
webdunia

ಸಾರಿಗೆ ನಿಗಮದ ಆಸ್ತಿಗಳು ಅಡ

Transport Corporation assets
bangalore , ಶುಕ್ರವಾರ, 11 ಮಾರ್ಚ್ 2022 (17:05 IST)
ಸಾರಿಗೆ ಇಲಾಖೆಯ 4 ನಿಗಮಗಳ ವಿವಿಧ ಆಸ್ತಿಯನ್ನು ಅಡವಿಟ್ಟಿದ್ದೇವೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ. ಈ ಸಂಬಂಧ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಸಾರಿಗೆ ಇಲಾಖೆ 4 ನಿಗಮಗಳ ವಿವಿಧ ಆಸ್ತಿಗಳನ್ನು ಅಡಮಾನ ಇಟ್ಟು ಸಾಲ ಪಡೆಯಲಾಗಿದೆ.
ಬಿಎಂಟಿಸಿ - 390 ಕೋಟಿ ರೂ., ವಾಯುವ್ಯ ಸಾರಿಗೆ - 100 ಕೋಟಿ ರೂ., ಕಲ್ಯಾಣ ಕರ್ನಾಟಕ ಸಾರಿಗೆ - 50 ಕೋಟಿ ರೂ. ಒಟ್ಟು 540 ಕೋಟಿ ರೂ. ಸಾಲ ಮಾಡಲಾಗಿದೆ ಎಂದರು. ಕೊರೊನಾ ಸಮಯದಲ್ಲಿ ನೌಕರರಿಗೆ ನಮಗೆ ಸಂಬಳ ಕೊಡಲು ಹಣ ಇರಲಿಲ್ಲ ಈ ವೇಳೆ ಸಾಲ ಮಾಡಿದ್ದೇವೆ. ಅಲ್ಲದೇ ನೌಕರರ ಭವಿಷ್ಯ ನಿಧಿ ಬಳಕೆಗೆ ಕೂಡ ಸಾಲ ಮಾಡಿದ್ದೇವೆ. ಕೊರೊನಾ ಸಮಯ ದಲ್ಲಿ ಸರ್ಕಾರ ಸಾರಿಗೆ ಇಲಾಖೆಗೆ 2,958 ಕೋಟಿ ರೂ. ನೀಡಿ ನೌಕರರಿಗೆ ಸಂಬಳ ನೀಡಲು ಮುಂದಾಗಿತ್ತು. ಸದ್ಯ ಕೋವಿಡ್‍ ನಲ್ಲಿ ಮೃತರಾದ ಸಿಬ್ಬಂದಿಗಳ ಮಾಹಿತಿ ಪಡೆಯಲಾಗುತ್ತಿದ್ದು, ಮಾಹಿತಿ ಬಂದ ಹಾಗೆ ಪರಿಹಾರ ನೀಡಲಾಗುತ್ತಿದೆ ಎಂದು ಮಾಹಿತಿ ಹಂಚಿಕೊಂಡರು

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣಾ ಫಲಿತಾಂಶ ನಮಗೊಂದು ಪಾಠ: ಮಾಯಾವತಿ