Publish Date: Sun, 02 Jan 2022 (20:36 IST)
Updated Date: Sun, 02 Jan 2022 (21:08 IST)
ಪಾಸ್ ಅವಧಿ ವಿಸ್ತರಿಸಿ ಸಂಸ್ಥೆಯ ಕೇಂದ್ರ ಕಚೇರಿಯಿಂದ ಹೊರಬಿದ್ದ ಆದೇಶ
ಬೆಂಗಳೂರು : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನೀಡಿದ್ದು, ವಿದ್ಯಾರ್ಥಿಗಳ ಬಸ್ ಪಾಸ್ ಗಳ ಅವಧಿಯನ್ನು ಜನವರಿ 15 ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ.ವಿದ್ಯಾರ್ಥಿಗಳು 2021-22 ನೇ ಸಾಲಿನ ಶುಲ್ಕ ರಶೀದಿ ಅಥವಾ ಗುರುತಿನ ಚೀಟಿಯೊಂದಿಗೆ ಉಚಿತವಾಗಿ ಪ್ರಯಾಣಿಸಬಹುದಾಗಿದೆ ಎಂದು ತಿಳಿಸಿದೆ.
1 ರಿಂದ 10 ನೇ ತರಗತಿ, ಪಿಯುಸಿ, ಐಟಿ, ಡಿಪ್ಲೋಮಾ, ಪದವಿ, ಸ್ನಾತಕೋತ್ತರ, ತಾಂತ್ರಿಕ, ವೈದ್ಯಕೀಯ, ಸಂಜೆ ಕಾಲೇಜು ಹಾಗೂ ಪಿಎಚ್ ಡಿ ವಿದ್ಯಾರ್ಥಿಗಳಿಗೆ 2021 ನವೆಂಬರ್ 14 ರಿಂದ ಪಾಸ್ ಗಳನ್ನು ವಿತರಣೆಮಾಡಲಾಗುತ್ತಿದೆ ಎಂದು ಶಾಂತಿನಗರದ ಕೇಂದ್ರ ಕಚೇರಿಯಿಂದ ಹೊರಡಿಸಲಾದ ಆದೇಶದಲ್ಲಿ ಮಾಹಿತಿ ನೀಡಿದೆ.