Publish Date: Sat, 26 Feb 2022 (11:53 IST)
Updated Date: Sat, 26 Feb 2022 (11:55 IST)
ಬೆಂಗಳೂರು : ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗಾಗಿ ಕೆಲ ಆಸನಗಳನ್ನು ಮೀಸಲಿಡಲಾಗುತ್ತದೆ.
ಬಸ್ನ ಮುಂಭಾಗದ ಕೆಲ ಆಸನಗಳು ಮಹಿಳೆಯರಿಗೆಂದು ನೀಡಲಾಗುತ್ತದೆ. ಹೀಗೆ ಮೀಸಲಿಟ್ಟ ಆಸನಗಳಲ್ಲಿ ಪುರುಷರು ಕೂರುವಂತಿಲ್ಲ. ಅಂತಹ ಆಸನಗಳನ್ನ ಆಕ್ರಮಿಸಿಕೊಂಡರೆ ಪುರುಷರಿಗೆ ದಂಡವನ್ನೂ ಹಾಕಲಾಗುತ್ತದೆ.
2021ರಲ್ಲಿ ಮಹಿಳೆಯರ ಆಸನದಲ್ಲಿ ಕುಳಿತ ಪುರುಷರಿಗೆ ದಂಡ ಹಾಕಿದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸುಮಾರು 1,00,300 ರೂ. ಹಣ ಸಂಗ್ರಹಿಸಿದೆ.
ಜೊತೆಗೆ ಈ ವರ್ಷ 2,377 ಟಿಕೆಟ್ ರಹಿತ ಪ್ರಯಾಣಿಕರಿಗೆ ದಂಡ ವಿಧಿಸಿದ ಬಿಎಂಟಿಸಿ ತಪಾಸಣಾ ಸಿಬ್ಬಂದಿ 3,94,905 ರೂ. ಹಣ ಸಂಹಗ್ರಹಿಸಿದೆ. ಹಾಗೂ ಮಹಿಳೆಯರ ಆಸನಗಳನ್ನ ಆಕ್ರಮಿಸಿಕೊಂಡ 134 ಪುರುಷ ಪ್ರಯಾಣಿಕರಿಂದ ಒಟ್ಟು 13,400 ರೂ. ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.