Publish Date: Sat, 25 Nov 2017 (08:05 IST)
Updated Date: Sat, 25 Nov 2017 (08:11 IST)
ಹಾಸನ: ಹಣ ಆಸ್ತಿಯ ವಿಷಯಕ್ಕಾಗಿ ಜನ ಹೊಡೆದಾಡುವುದನ್ನು ಎಲ್ಲಾ ಕಡೆ ನೋಡಿರುತ್ತೇವೆ. ಆದರೆ ಒಂದು ಹುಡುಗಿಯ ವಿಚಾರಕ್ಕೆ ನಡುರಸ್ತೆಯಲ್ಲಿ ಎರಡು ಗುಂಪುಗಳು ಹೊಡೆದಾಡಿದ ಘಟನೆಯೊಂದು ಹಾಸನದಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಅರಕಲಗೂಡು ಪಟ್ಟಣದ ಬಸ್ ನಿಲ್ದಾಣದಲ್ಲಿ ಇಬ್ಬರು ಹುಡುಗರು ಒಬ್ಬ ಹುಡುಗಿಯ ವಿಚಾರಕ್ಕೆ ಗುಂಪುಗಳ ಜತೆ ಸೇರಿ ಹೊಡೆದಾಡಿದರು. ಈ ಘಟನೆ ನಡೆದಿದ್ದು ಅವರ ಕಾಲೇಜಿನ ಸಮೀಪವಿರುವ ಬಸ್ ನಿಲ್ದಾಣದಲ್ಲಿ.
ನಡುರಸ್ತೆಯಲ್ಲಿ ಬಿಯರ್ ಬಾಟಲಿನಿಂದ ಹೊಡೆದಾಡುತ್ತಿರುವ ಕಾಲೇಜು ಹುಡುಗರನ್ನು ಕಂಡು ಸ್ಥಳೀಯರು ಆಗಮಿಸಿ ಜಗಳವನ್ನು ನಿಲ್ಲಿಸಿದರು. ಸ್ಥಳೀಯರ ಮಧ್ಯಸ್ಥಿಕೆಯಿಂದ ಭಾರಿ ಅನಾಹುತ ತಪ್ಪಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.