Publish Date: Fri, 17 Nov 2017 (08:19 IST)
Updated Date: Fri, 17 Nov 2017 (08:22 IST)
ಲಂಡನ್: ಇಂಗ್ಲೆಂಡ್ ನ ಅಂಡರ್-19 ತಂಡದ ಮಾಜಿ ನಾಯಕ ಶಿವ ಠಾಕೂರ್ ಇಬ್ಬರು ಮಹಿಳೆಯರ ಮುಂದೆ ಗುಪ್ತಾಂಗ ಪ್ರದರ್ಶಿಸಿದ ತಪ್ಪಿಗೆ ಶಿಕ್ಷೆಗೊಳಗಾಗಿದ್ದಾರೆ.
24 ವರ್ಷದ ಶಿವ ಠಾಕೂರ್ ಮಹಿಳೆಯರ ಮುಂದೆ ತನ್ನ ಗುಪ್ತಾಂಗ ಪ್ರದರ್ಶಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ವರ್ಷ ಜೂನ್ ತಿಂಗಳಲ್ಲಿ ಬಂಧನಕ್ಕೊಳಗಾಗಿದ್ದರು.
ಇದೀಗ ವಿಚಾರಣೆ ಪೂರ್ಣಗೊಳಿಸಿದ ದಕ್ಷಿಣ ಡರ್ಬಿಶೈರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಕ್ರಿಕೆಟಿಗನನ್ನು ಅಪರಾಧಿ ಎಂದು ಘೋಷಿಸಿದೆ. ಆದರೆ ಆರೋಪಿ ಶಿವ ಠಾಕೂರ್ ಆರೋಪ ನಿರಾಕರಿಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ