Publish Date: Fri, 17 Nov 2017 (09:22 IST)
Updated Date: Fri, 17 Nov 2017 (09:24 IST)
ಚೆನ್ನೈ: ರಾಜಕೀಯಕ್ಕೆ ಎಂಟ್ರಿಯಾಗುತ್ತಿರುವ ಕಮಲ್ ಹಾಸನ್ ತಮ್ಮದೇ ಪಕ್ಷ ಕಟ್ಟಿಕೊಳ್ಳಲು ತಯಾರಿ ಆರಂಭಿಸಿದ್ದಾರೆ. ಆದರೆ ಇದಕ್ಕಾಗಿ ತಮಗೆ ದೇಣಿಗೆ ರೂಪದಲ್ಲಿ ಬಂದ ಹಣವನ್ನು ವಾಪಸ್ ನೀಡುತ್ತಿದ್ದಾರಂತೆ.
ಇನ್ನೂ ನಾನು ರಾಜಕೀಯ ಪಕ್ಷ ಘೋಷಣೆ ಮಾಡಿಲ್ಲ. ಅದಕ್ಕಿಂತ ಮೊದಲೇ ದೇಣಿಗೆ ಸ್ವೀಕರಿಸುವುದು ಅಕ್ರಮವಾಗುತ್ತದೆ ಎನ್ನುವ ಕಾರಣಕ್ಕೆ ಹಣ ಮರಳಿಸಲು ನಿರ್ಧರಿಸಿದ್ದಾರಂತೆ. ಹೀಗಂತ ತಮಿಳು ಪತ್ರಿಕೆಯೊಂದರ ಅಂಕಣದಲ್ಲಿ ಕಮಲ್ ಹೇಳಿಕೊಂಡಿದ್ದಾರೆ.
ಆದರೆ ಪಕ್ಷ ಸ್ಥಾಪನೆಯ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ. ಆದರೆ ಸ್ಥಾಪನೆಗೆ ಮೊದಲು ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಣಾಸಿ ಕ್ಷೇತ್ರಕ್ಕೆ ಭೇಟಿ ನೀಡುವ ಯೋಜನೆ ಕಮಲ್ ಗಿದೆಯಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ