Select Your Language

Notifications

webdunia
webdunia
webdunia
webdunia

ಬಿಜೆಪಿ ವಿರುದ್ಧ ಟ್ವೀಟ್ ನಲ್ಲಿ ವಾಗ್ದಾಳಿ –ಎಂ.ಬಿ. ಪಾಟೀಲ್

Twitter attack against BJP
bangalore , ಮಂಗಳವಾರ, 24 ಜನವರಿ 2023 (20:23 IST)
ಅಧಿಕಾರದಲ್ಲಿದ್ದಾಗ ಎಂ.ಬಿ ಪಾಟೀಲ್ ವೀರಶೈವ- ಲಿಂಗಾಯತರ ನಡುವೆ ಕಂದಕ ಸೃಷ್ಟಿಸಿದರೆಂಬ ಬಿಜೆಪಿ ಟ್ವೀಟ್ ಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ತಿರುಗೇಟು ಕೊಟ್ಟಿದ್ದಾರೆ. ಬಳಸಿ ಬಿಸಾಡುವ ನಿಮ್ಮ ತಂತ್ರಕ್ಕೆ ಬಲಿಯಾಗದೇ ಉಳಿದವರುಂಟೇ . ನಿಮ್ಮದು ಬಳಸಿಕೊಂಡು ಬಿಸಾಡುವ ನೀತಿ.ಪಕ್ಷವನ್ನು ಕಟ್ಟಿ, ಅಧಿಕಾರಕ್ಕೆ ತಂದವರನ್ನು ಅವಮಾನಿಸಿ, ಜೈಲಿಗಟ್ಟಿ, ಅಧಿಕಾರ ಕಸಿದು ಅವರ ಮೇಲೆಲ್ಲಾ ರೇಡ್ ಭಾಗ್ಯ ಮಾಡಿಸಿದ ನಿಮ್ಮ ಲಿಂಗಾಯತ ಪ್ರೇಮ ಎಲ್ಲರಿಗೂ ತಿಳಿದಿದೆ. ಯಡಿಯೂರಪ್ಪ ವಿರುದ್ಧ ಯತ್ನಾಳ್, ಯತ್ನಾಳ್ ವಿರುದ್ಧ ನಿರಾಣಿ, ನಿರಾಣಿ ವಿರುದ್ಧ ಬೊಮ್ಮಾಯಿ, ಬೊಮ್ಮಾಯಿ ವಿರುದ್ಧ ಶೆಟ್ಟರ್ ಹೀಗೆ ಲಿಂಗಾಯತ ನಾಯಕರು ಕಚ್ಚಾಡುವಂತೆ ಮಾಡಿರುವ ನಿಮ್ಮ ಹಿಡನ್ ಅಜಂಡಾ ಏನು ಮನುವಾದಿಗಳೇ ಎಂದು ಬಿಜೆಪಿ ವಿರುದ್ಧ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೊಮ್ಮಾಯಿ ನಾಯಕತ್ವದ ಬಗ್ಗೆ ಅಸಮಧಾನ ಹೊರಹಾಕಿದ ರಮೇಶ್ ಕುಮಾರ್