Select Your Language

Notifications

webdunia
webdunia
webdunia
webdunia

ಕ್ಷಯ ಮುಕ್ತ ಭಾರತ ಮೋದಿ ಕನಸು: ಗೆಹ್ಲೋಟ್

ಕ್ಷಯ ಮುಕ್ತ ಭಾರತ ಮೋದಿ ಕನಸು: ಗೆಹ್ಲೋಟ್
ಬೆಂಗಳೂರು , ಮಂಗಳವಾರ, 14 ಮಾರ್ಚ್ 2023 (09:58 IST)
ಬೆಂಗಳೂರು : ದೇಶದ ಪ್ರಧಾನಿಯವರು ಟಿಬಿ ಮುಕ್ತ ಭಾರತಕ್ಕಾಗಿ ಪಣ ತೊಟ್ಟಿದ್ದಾರೆ. ತಮ್ಮ ಕನಸಿನ ಸಾಕಾರಕ್ಕಾಗಿ ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆ ನೀಡಿದ್ದಾರೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.

ಕ್ಷಯ ರೋಗಿಗಳ ದತ್ತು ಪಡೆಯುವ ಮತ್ತು ನಿ-ಕ್ಷಯ ಮಿತ್ರ ದಾನಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಟಿಬಿ ಮುಕ್ತ ಭಾರತ ಅಭಿಯಾನವನ್ನು ಜನಾಂದೋಲನವನ್ನಾಗಿ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ನಾಗರಿಕರು, ಎನ್ಜಿಒಗಳು, ಕಾರ್ಪೋರೇಟ್ ಸಂಸ್ಥೆಗಳು, ಚುನಾಯಿತ ಪ್ರತಿನಿಧಿಗಳು ನಿ-ಕ್ಷಯ ಮಿತ್ರರಾಗುವ ಮೂಲಕ ಟಿಬಿ ಮುಕ್ತ ಭಾರತ ಅಭಿಯಾನವನ್ನು ಬೆಂಬಲಿಸಬೇಕು. ಒಬ್ಬರ ಜೀವವನ್ನು ಉಳಿಸುವ ಕಾರ್ಯವು ಮಾನವೀಯ ಸೇವೆಯ ಅತ್ಯುತ್ತಮ ಕಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. 

`ನಿ-ಕ್ಷಯ 2.0′ ಪೋರ್ಟ್ಲ್  ಸುಮಾರು 13.5 ಲಕ್ಷ ಕ್ಷಯ ರೋಗಿಗಳು ನೋಂದಾಯಿಸಿಕೊಂಡಿದ್ದಾರೆ. ಅವರಲ್ಲಿ 89 ಲಕ್ಷ ಸಕ್ರಿಯ ಟಿಬಿ ರೋಗಿಗಳು ದತ್ತು ತೆಗೆದುಕೊಳ್ಳಲು ಒಪ್ಪಿಗೆ ನೀಡಿದ್ದಾರೆ. ನಿ-ಕ್ಷಯ ಪೋರ್ಟಲ್ ಟಿಬಿಯಿಂದ ಬಳಲುತ್ತಿರುವ ವ್ಯಕ್ತಿಗಳ ಬೆಂಬಲಕ್ಕಾಗಿ ವೇದಿಕೆಯನ್ನು ಒದಗಿಸುತ್ತಿದೆ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮಂಡ್ಯ ನಾಯಕರಿಗೆ ಎಚ್‌ಡಿಡಿಯಿಂದ ಖಡಕ್ ಸೂಚನೆ