Select Your Language

Notifications

webdunia
webdunia
webdunia
webdunia

ಗುಣಮಟ್ಟ ಶಿಕ್ಷಣ ದೇಶದ ಪ್ರಗತಿಗೆ ದಾರಿ : ಗೆಹ್ಲೋಟ್

ಗುಣಮಟ್ಟ ಶಿಕ್ಷಣ ದೇಶದ ಪ್ರಗತಿಗೆ ದಾರಿ : ಗೆಹ್ಲೋಟ್
ಬೆಂಗಳೂರು , ಗುರುವಾರ, 5 ಜನವರಿ 2023 (14:41 IST)
ಬೆಂಗಳೂರು : ಶಿಕ್ಷಣವು ವ್ಯಕ್ತಿಯ ದೇಶ ಮತ್ತು ವಿಶ್ವದ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತದೆ. ಶಿಕ್ಷಣವು ಸಮಾಜಕ್ಕೆ, ದೇಶ ಮತ್ತು ಜಗತ್ತಿಗೆ ಸರಿಯಾದ ದಿಕ್ಕನ್ನು ನೀಡುವ ಏಕೈಕ ಸಾಧನವಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.

ನಗರದ ಗುಡ್ ಷೆಫರ್ಡ್ ಶಾಲೆಯಲ್ಲಿ ಭಾರತದ ಆಂಗ್ಲೋ ಇಂಡಿಯನ್ ಶಾಲೆಗಳ ಮುಖ್ಯಸ್ಥರ ಸಂಘ(ಎಹೆಚ್ಎಐಎಸ್)ವು ಆಯೋಜಿಸಿದ್ದ ಶತಮಾನೋತ್ಸವ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣವನ್ನು ಕೌಶಲ್ಯ ಮತ್ತು ನೈತಿಕ ಮೌಲ್ಯಗಳೊಂದಿಗೆ ಜೋಡಿಸುವ ಮೂಲಕ ನವ ಭಾರತ, ಶ್ರೇಷ್ಠ ಭಾರತ, ಆತ್ಮನಿರ್ಭರ ಭಾರತ ಮಾಡಲು ದೇಶದ ಪ್ರಧಾನ ಮಂತ್ರಿ ಬದ್ಧರಾಗಿದ್ದಾರೆ. ಆಧುನಿಕ ಜ್ಞಾನವನ್ನು ಮಾನವ ಮೌಲ್ಯಗಳೊಂದಿಗೆ ಸಂಯೋಜಿಸುವ ಮೂಲಕ, ಎಲ್ಲರಿಗೂ ಮೌಲ್ಯಯುತ ಶಿಕ್ಷಣಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿ – 2020 ಅನ್ನು ಸಿದ್ಧಪಡಿಸಲಾಗಿದೆ.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ನಮ್ಮ ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಯ ಭವಿಷ್ಯವನ್ನು ಉಜ್ವಲ ಮತ್ತು ಸುರಕ್ಷಿತ ಮತ್ತು ಭಾರತವನ್ನು ಜಾಗತಿಕ ಜ್ಞಾನ ಶಕ್ತಿಯನ್ನಾಗಿ ಮಾಡಲಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ.ಗಳ ಪರಿಹಾರ : ಬೊಮ್ಮಾಯಿ