Publish Date: Tue, 14 Mar 2023 (09:42 IST)
Updated Date: Tue, 14 Mar 2023 (10:35 IST)
ಮಂಡ್ಯ : ಸಕ್ಕರೆ ನಾಡಿಗೆ ಪ್ರಧಾನಿ ನರೇಂದ್ರ ಮೋದಿ ಬಂದು ಹೋದ ಮೇಲೆ ಮಂಡ್ಯದಲ್ಲಿ ರಾಜಕೀಯ ಕಾವು ಹೆಚ್ಚಾಗಿದೆ. ದೊಡ್ಡಗೌಡರು ಮಂಡ್ಯದ ದಳಪತಿಗಳನ್ನು ಕರೆದು ಸಂಸದೆ ಸುಮಲತಾ ಅವರ ಬಗ್ಗೆ ಯಾರು ಮಾತಾಡಬೇಡಿ ಎಂದು ಖಡಕ್ ಸೂಚನೆಯನ್ನು ನೀಡಿದ್ದಾರೆ.
ಭಾನುವಾರ ಮಂಡ್ಯಗೆ ಪ್ರಧಾನಿ ಮೋದಿ ಬಂದು ಹೋದ ಮೇಲೆ ಮಾಜಿ ಪ್ರಧಾನಿ ದೇವೇಗೌಡರು ಅಖಾಡಕ್ಕಿಳಿದಿದ್ದಾರೆ. ಜೆಡಿಎಸ್ ಭದ್ರಕೋಟೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ದೇವೇಗೌಡರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಜಿಲ್ಲೆಯ 7 ಕ್ಷೇತ್ರದ ಪೈಕಿ ಆರು ಮಂದಿ ಶಾಸಕರು ಹಾಗೂ ಅಭ್ಯರ್ಥಿಗಳನ್ನು ಕರೆದು ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ.
ಎಲ್ಲಾ 7 ಕ್ಷೇತ್ರಗಳಲ್ಲೂ ಕಳೆದ ಬಾರಿ ಗೆಲುವು ಪಡೆದಂತೆ ಈ ಬಾರಿಯೂ ಕ್ಲೀನ್ ಸ್ವೀಪ್ ಮಾಡಬೇಕೆಂದು ದೇವೇಗೌಡರು ಎಲ್ಲರಿಗೂ ಖಡಕ್ ಸೂಚನೆ ನೀಡಿದ್ದಾರೆ. ಪ್ರಮುಖವಾಗಿ ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಯಾರು ಮಾತಾಡದಂತೆ ಸೂಚನೆ ನೀಡಿದ್ದಾರೆ.