Publish Date: Thu, 02 Mar 2023 (07:29 IST)
Updated Date: Thu, 02 Mar 2023 (00:31 IST)
ಮಂಡ್ಯ : ನಾನು ರಾಜಕೀಯಕ್ಕೆ ಬಂದಿರುವುದೇ ಆಕಸ್ಮಿಕ. ನಾನು ಪೂರ್ಣ ಪ್ರಮಾಣದಲ್ಲಿ ಇಲ್ಲೇ ಇರಲು ಬರಲಿಲ್ಲ. ಚುನಾವಣೆಗೆ ನಿಲ್ಲುವ ಬಗೆಗೆ ಆಗಲಿ,
ರಾಜಕೀಯ ಪಕ್ಷ ಸೇರುವ ಬಗೆಗೆ ಆಗಲಿ ಅಥವಾ ಸ್ವತಂತ್ರವಾಗಿ ಉಳಿಯುವ ಬಗೆಗೆ ಆಗಲಿ ಇನ್ನೂ ನಿರ್ಧಾರವಾಗಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ರಾಜ್ಯ ರಾಜಕಾರಣಕ್ಕೆ ಸಂಸದೆ ಸುಮಲತಾ ಅಂಬರೀಶ್ ಬರಬೇಕು ಎಂಬ ಬೆಂಬಲಿಗರ ನಿರ್ಧಾರ ವಿಚಾರವಾಗಿ ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ನಿಲ್ಲಬೇಕು ಎಂಬುದು ಅಷ್ಟು ಸುಲಭವಾದ ವಿಚಾರವಲ್ಲ. ಅದೊಂದು ದೊಡ್ಡ ನಿರ್ಧಾರವಾಗುತ್ತದೆ.
ಚುನಾವಣೆಗೆ ಎಷ್ಟು ದಿನವಿದೆ ಎನ್ನುವುದು ಮುಖ್ಯವಲ್ಲ. ಆದರೆ ಅನುಕೂಲಕರ ವಾತಾವರಣ ಎಷ್ಟಿದೆ ಎಂಬುವುದು ಮುಖ್ಯ. ಹಾಗಾಗಿ ರಾಜ್ಯ ರಾಜಕಾರಣಕ್ಕೆ ಬರುತ್ತೇನೆ ಎಂಬುವುದನ್ನು ಹೇಳಲು ಇದು ಸಮಯವಲ್ಲ ಎಂದು ಸ್ಪಷ್ಟನೆ ನೀಡಿದರು.