Select Your Language

Notifications

webdunia
webdunia
webdunia
webdunia

ಜೈಲಿನಲ್ಲಿದ್ರೂ ಡ್ಯಾಮೆಜ್ ಕಂಟ್ರೋಲ್ ಗೆ ಯತ್ನ

Trying to do damage control even in jail
bangalore , ಮಂಗಳವಾರ, 18 ಜುಲೈ 2023 (14:51 IST)
ನಿಶಾ ನರಸಪ್ಪ ಚೀಟಂಗ್ ಕಥೆ ಸಣ್ಣದೇನಿಲ್ಲ ಬಿಡಿ.. ದಿನದಿಂದ ದಿನಕ್ಕೆ ನಿಶಾಳ ವಂಚನೆ ಕಥೆಗಳು ಒಂದೊಂದೆ ಹೊರ ಬರ್ತಿವೆ.. ಬರೀ ಬೆಂಗಳೂರು ಅಷ್ಟೇ ಅಲ್ಲಾ ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲಗಳಲ್ಲೂ ಈಕೆ ವಿರಿದ್ದ ದೂರು ದಾಖಲಾಗ್ತಿದೆ.. ರಾಜ್ಯದ ಹಲವೆಡೆ ವಂಚನೆ ಜಾಲ ಹೆಚ್ಚಿಸಿದ್ದ ನಿಶಾ ಬಳಸಿಕೊಂಡಿದ್ದು ವಂಶಿಕಾ ಹೆಸ್ರು ಮಾತ್ರ ಅಲ್ಲ.. ಸ್ಯಾಂಡಲ್ ವುಡ್ ಗೋಲ್ಡನ್ ಸ್ಟಾರ್ ಗಣೇಶ್ ಹೆಸ್ರೂ ಹೇಳಿರೋದು ಗೊತ್ತಾಗಿದೆ.

ಈಕೆಯನ್ನ ನಂಬಿ ಪೋಷಕರು ಹೇಗೆಲ್ಲಾ ಲಕ್ಷ ಲಕ್ಷ ಹಣ ಕೊಡ್ತಿದ್ರು ಅನ್ನೋ ಡೌಟ್ ಎಲ್ರಿಗೂ ಇದ್ದೇ ಇರುತ್ತೆ.. ಅದಕ್ಕೆ ರೀಸನ್ ಈಕೆ ಬಳಸ್ತಿದ್ದ ಹೆಸ್ರುಗಳು.. ಈಕೆ ಮಾತಾಡ್ತಿದ್ದ ರೀತಿ.. ಮಾಸ್ಟರ್ ಆನಂದ್ ಹೆಸ್ರು ಅಷ್ಟೇ ಅಲ್ಲ ಗೋಲ್ಡನ್ ಸ್ಟಾರ್ ಗಣೇಶ್ ಹೆಸ್ರೂ ಬಳಸಿ ನಿಶಾ ನರಸಪ್ಪ ವಂಚನೆ ಮಾಡಿರೋದು ಬೆಳಕಿಗೆ ಬಂದಿದೆ. ಆಡಿಯೋ ಒಂದರಲ್ಲಿ ಗೋಲ್ಡನ್ ಸ್ಟಾರ್ ಜೊತೆ ಸಿನಿಮಾ ಮಾಡೋ ಪ್ಲಾನ್ ನಡೀತಿದೆ.. ಅದ್ರಲ್ಲಿ ನಿಮ್ಮ ಮಕ್ಕಳಿಗೂ ಆ್ಯಕ್ಟಿಂಗ್ ಚಾನ್ಸ್ ಕೊಡಿಸ್ತೀವಿ ಅಂತಾ ನಿಶಾ ಮಾತನಾಡಿರೋ ಆಡಿಯೋ ಒಂದು ವೈರಲ್ ಆಗಿದೆ.

ಸ್ಯಾಂಡಲ್ ವುಡ್ ನ ಬಹುತೇಕ ಸ್ಟಾರ್ ಗಳ ಹೆಸ್ರು ಬಳಸ್ತಿದ್ದ ನಿಶಾ ಹೆಂಗೋ ರೀಲ್ ಬಿಟ್ಟು.. ಕೆಲ ಕಾರ್ಯಕ್ರಮಗಳಿಗೆ ಇನ್ವೈಟ್ ಮಾಡಿ ಹಣ ಈಸ್ಕೋತಿದ್ಳು.. ಎಲ್ಲರತ್ತಿ ಕ್ಯಾಶನ್ನೇ ಹೆಚ್ಚು ಕಲೆಕ್ಟ್ ಮಾಡ್ತಿದ್ದ ನಿಶಾ ಹಣ ಅಕೌಂಟ್ ಗೆ ಬಂದಿದ್ದೇ ತಡ ತನ್ನಾಟ ಶುರು ಮಾಡಿದ್ಳು.. ತನ್ನ ಕಂಪನಿ ಲಾಸ್ ಆಗಿದೆ.. ಆಗೆ ಹೀಗೆ ಕಥೆ ಕಟ್ತಿದ್ದ ನಿಶಾ ಹಣ ಕೇಳಿದೋರಿಗೆ ಅವಾಜ್ ಹಾಕಿ ಏನ್ ಕೇಸ್ ಹಾಕ್ತೀರೋ ಹಾಕೊಳ್ಳಿ ಅಂತಾ ಅವಾಜ್ ಕೂಡ ಹಾಕಿ ತಪ್ಪಿಸಿಕೊಳ್ತಿದ್ಳು.ಇನ್ನು ಇಷ್ಟೆಲ್ಲಾ ಆಗಿ ನಿಶಾ ಜೈಲಿನಲ್ಲಿದ್ರೂ ತನ್ನಾಟಕ್ಕೆ ಬ್ರೇಕ್ ಕೊಡೋ ಹಾಗೆ ಕಾಣಿಸ್ತಿಲ್ಲ.. ಇವತ್ತು ಮಧ್ಯಾಹ್ನದ ಸುಮಾರಿಗೆ ಇನ್ಸ್ಟಾಗ್ರಾಮ್ ಮೂಲಕ ಮತ್ತೆ ಡ್ಯಾಮೇಜ್ ಕಂಟ್ರೋಲ್ ಗೆ ಟ್ರೈ ಮಾಡಿದ್ದಾಳೆ.. ನನ್ನ ಮೇಲಿನ ಆರೋಪಕ್ಕೆ ಸ್ಪಷ್ಟನೆ ಕೊಡ್ತೀನಿ.. ತನಿಖೆ ನಡೀತಿದೆ ಎಲ್ಲದಕ್ಕೂ ಸ್ಪಷ್ಟನೆ ನೀಡ್ತೀನಿ ಅಂತಾ ಪೋಸ್ಟ್ ಮಾಡಿದ್ದಾಳೆ.. ಅಷ್ಟೇ ಅಲ್ಲ ಹೊಸದಾಗಿ ಫೋಟೋಶೂಟ್ ಗೆ ರಿಜಿಸ್ಟರ್ ಮಾಡಿಕೊಳ್ಳಿ ನನ್ನ ಸಿಬ್ಬಂದಿಯನ್ನ ಕಾಂಟ್ಯಾಕ್ಟ್ ಮಾಡಿ ಅಂತಾನೂ ಪೋಸ್ಟ್ ಮಾಡಿದ್ದಾಳೆ.ಸದ್ಯ ನಿಶಾ ವಂಚನೆಯ ಒಂದೊಂದು ಕಥೆಗಳು ದಿನಕಳೆದಂತೆ ಬಯಲಾಗುತ್ತಲೇ ಇದೆ.. ಇನ್ನೂ ಈಕೆ ವಿರುದ್ದ ಸಾಲು ಸಾಲು ದೂರುಗಳು ಠಾಣೆಗಳಿಗೆ ಬರುತ್ತಲೇ ಇವೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೈಕೋರ್ಟ್ ಆದೇಶವನ್ನು ಗಾಳಿಗೆ ತೂರಿದ ಕಾಂಗ್ರೆಸ್ ಪಕ್ಷ