Select Your Language

Notifications

webdunia
webdunia
webdunia
webdunia

ಸರ್ಕಾರಕ್ಕೆ ಎಚ್ಚರಿಕೆ ಘಂಟೆ ನೀಡುತ್ತಿರುವ ಸಾರಿಗೆ ನೌಕರರು

Transport employees
bangalore , ಬುಧವಾರ, 27 ಅಕ್ಟೋಬರ್ 2021 (20:52 IST)
ಸಾರಿಗೆ ನೌಕರರ ಮುಷ್ಕರ ಇಂದು ನಿನ್ನೆಯದಲ್ಲ . ಕಳೆದ ಎರಡುವರ್ಷದಿಂದ ಸಾರಿಗೆ ನೌಕರರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಾ ಬಂದಿದ್ದಾರೆ. ಆದ್ರೆ ಅವರ ಬೇಡಿಕೆಗಳು ಮಾತ್ರ ಇನ್ನೂ ಈಡೇರಿಲ್ಲ. 21-09-21 ರಂದು ಸಾರಿಗೆ ನಿಗಮಗಳಲ್ಲಿನ  ಕಾರ್ಮಿಕ ಸಂಘಗಳು ಮತ್ತು ಅಧಿಕಾರಿಗಳ ಸಭೆ ನಡೆಸಿದ್ದ ಸಾರಿಗೆ ಸಚಿವ ಶ್ರೀರಾಮುಲು ನೌಕರರ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ರು. ಆದ್ರೆ ಸಚಿವರು ಭರವಸೆ ನೀಡಿದಂತೆ ಯಾವುದೇ ಬೇಡಿಕೆ ಈಡೇರಿಸಿಲ್ಲ. ಬದಲಿಗೆ ಸಭೆ ಬಳಿಕವು ಬಿಎಂಟಿಸಿಯ 57 ನೌಕರರನ್ನ ವಜಾಮಾಡಿದ್ದಾರೆ. ಹೀಗಾಗಿ ನೊಂದ ಸಾರಿಗೆ ನೌಕರರು ಇಂದು ಬೀದಿಗೆ ಇಳಿದಿದ್ದಾರೆ . ಆದ್ರೆ ಸದ್ಯ ಬಸ್  ಸಂಚಾರದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ . ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿರುವ ನೌಕರರು ಮೌರ್ಯ ಸರ್ಕಲ್ ನಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ಮುಂದಾಗಿದ್ದಾರೆ 

Share this Story:

Follow Webdunia kannada

ಮುಂದಿನ ಸುದ್ದಿ

ಪಂಜಾಬ್ ನಲ್ಲಿ ಮತ್ತೊಂದು ರಾಜಕೀಯ ಪಕ್ಷ ಉದಯ