Publish Date: Thu, 21 Oct 2021 (17:04 IST)
Updated Date: Thu, 21 Oct 2021 (17:07 IST)
ಬಿಎಂಟಿಸಿ ಸಾಲದ ಸುಳಿಯಲ್ಲಿ ಮುಳುಗಿದ್ದು, ಬಿಎಂಟಿಸಿ ಟಿಟಿಎಂಸಿ ಕಟ್ಟಡವನ್ನ ಸಾಲಕ್ಕಾಗಿ ಅಡಮಾನ ಇಟ್ಟಿರೋದು ಬಹಿರಂಗವಾಗಿದೆ. ಇದಕ್ಕೆ ಸಂಬಂಧ ಪಟ್ಟಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು 2016ರಿಂದ ದಿನಾಂಕ 2021ರವರೆಗೆ ಸಾಲ ಮಾಡಿರುವ ಹಣದ ಮೊತ್ತ, ಪ್ರತಿ ವರ್ಷವಾರು ಈ ಹಣಕ್ಕೆ ನೀಡಿರುವ ಬಡ್ಡಿಯ ಹಣದ ಮೊತ್ತ, ಸ್ಥಳೀಯ ಆಸ್ತಿಯನ್ನು ಅಡಮಾನ ಇಟ್ಟಿರುವ ಬಗ್ಗೆ ವಿವರ ನೀಡುವಂತೆ ತಿಳಿಸಲಾಗಿತ್ತು.ಸಂಬಂಧ ಮಾಹಿತಿ ನೀಡಿರುವಂತ ಬಿಎಂಟಿಸಿಯು, ಮಾಹಿತಿಯು ಜಾಲತಾಣದಲ್ಲಿ ಲಭ್ಯವಿದೆ. ಮಾಹಿತಿ ಭಾಗದಲ್ಲಿ ಸಂಪೂರ್ಣ ವಿಷಯವಿದೆ ಎಂದಿದೆ. 2020 ರಿಂದ 21ನೇ ಸಾಲಿನ ಮಾಹಿತಿಗೆ ಸಂಬಂಧಿಸಿದಂತೆ ರೂ.407.05 ಕೋಟಿಗಳ ಸಾಲವನ್ನು ಪಡೆಯಲಾಗಿದೆ.