Select Your Language

Notifications

webdunia
webdunia
webdunia
webdunia

ಸಾಲದ ಸುಳಿಯಲ್ಲಿ ಬಿಎಂಟಿಸಿ

ಸಾಲದ ಸುಳಿಯಲ್ಲಿ ಬಿಎಂಟಿಸಿ
ಬೆಂಗಳೂರು , ಬುಧವಾರ, 20 ಅಕ್ಟೋಬರ್ 2021 (16:34 IST)
ಬಿಎಂಟಿಸಿ ಸಾಲದ ಸುಳಿಯಲ್ಲಿ ಮುಳುಗಿದೆ ಎನ್ನುವುದಕ್ಕೆ ಸಾಕ್ಷಿಯ ಮಾಹಿತಿಯ ದಾಖಲೆಯೊಂದು ಹೊರ ಬಿದ್ದಿದೆ. ಇದೀಗ ತಾನಿರುವಂತ ಬಿಎಂಟಿಸಿ ಟಿಟಿಎಂಸಿ ಕಟ್ಟಡವನ್ನ ಸಾಲಕ್ಕಾಗಿ ಅಡಮಾನ ಇಟ್ಟಿರೋದು ಬಹಿರಂಗವಾಗಿದೆ.
 
ಈ ಕುರಿತಂತೆ ವ್ಯಕ್ತಿಯೊಬ್ಬರು ಮಾಹಿತಿ ಹಕ್ಕು ಕಾಯ್ದೆಯಡಿ ದಿನಾಂಕ 14-09-2021ರಂದು ಸಲ್ಲಿಸಲಾದಂತ ಅರ್ಜಿಯಲ್ಲಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು 2016ರಿಂದ ದಿನಾಂಕ 01-09-2021ರವರೆಗೆ ಸಾಲ ಮಾಡಿರುವ ಹಣದ ಮೊತ್ತ, ಪ್ರತಿ ವರ್ಷವಾರು ಈ ಹಣಕ್ಕೆ ನೀಡಿರುವ ಬಡ್ಡಿಯ ಹಣದ ಮೊತ್ತ, ಸ್ಥಳೀಯ ಆಸ್ತಿಯನ್ನು ಅಡಮಾನ ಇಟ್ಟಿರುವ ಬಗ್ಗೆ ವಿವರ ನೀಡುವಂತೆ ಕೋರಿದ್ದರು.ಇದಕ್ಕೆ ಉತ್ತರಿಸಿ, ಮಾಹಿತಿ ನೀಡಿರುವಂತ ಬಿಎಂಟಿಸಿಯು, ನೀವು ಕೇಳಿರುವಂತ ಮಾಹಿತಿಯು www.mybmtc.karnataka.gov.in ಜಾಲತಾಣದಲ್ಲಿ ಲಭ್ಯವಿದೆ. ಬಿಎಂಟಿಸಿ ಬಗ್ಗೆ ಇನ್ನಷ್ಟು ಮಾಹಿತಿ ಭಾಗದಲ್ಲಿ 2016-17 ರಿಂದ 2019-20ರವರೆಗೆ ಲಭ್ಯವಿರುತ್ತದೆ. 2020-21ನೇ ಸಾಲಿನ ಮಾಹಿತಿಗೆ ಸಂಬಂಧಿಸಿದಂತೆ ರೂ.407.05 ಕೋಟಿಗಳ ಸಾಲವನ್ನು ಪಡೆಯಲಾಗಿದೆ.ಒಟ್ಟು 57.57 ಕೋಟಿಗಳ ಬಡ್ಡಿಯನ್ನು ಪಾವತಿಸಲಾಗಿದೆ.
 
ಮುಂದುವರೆದು 2019-20 ಮತ್ತು 2020-21ನೇ ಸಾಲಿನಲ್ಲಿ ಸಂಸ್ಥೆಯು ಪಡೆದಿರುವ ರೂ.160 ಕೋಟಿ ಮತ್ತು ರೂ.230 ಕೋಟಿ ಸಾಲಕ್ಕೆ ಶಾಂತಿನಗರ ಟಿಟಿಎಂಸಿಯನ್ನು ಅಡಮಾನ ಇರಿಸಲಾಗಿದೆ ಎಂಬುದಾಗಿ ತಿಳಿಸಿದೆ. ಈ ಮೂಲಕ ಸಾಲದ ಸುಳಿಯಲ್ಲಿ ಬಿಎಂಟಿಸಿ ಇರೋದು ತಿಳಿದು ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಸ್ತೆ ಗುಂಡಿ ಮುಚ್ಚಲು ನಿಂತ ಪೊಲೀಸರು ಎಲ್ಲೆಡೆ ಪ್ರಶಂಷೆ..!!!