Select Your Language

Notifications

webdunia
webdunia
webdunia
webdunia

ಶಾಂತಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ

ಶಾಂತಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ
bangalore , ಸೋಮವಾರ, 11 ಅಕ್ಟೋಬರ್ 2021 (20:43 IST)
ನಗರದ ದೊಮ್ಮಲೂರು ವಾರ್ಡ್ ವ್ಯಾಪ್ತಿಯಲ್ಲಿ ಅಮರ ಜ್ಯೋತಿ ಲೇಔಟ್ ನ 5 ಮತ್ತು 6ನೇ ಮುಖ್ಯರಸ್ತೆಯಲ್ಲಿ ಮಳೆನೀರು ಸರಾಗವಾಗಿ ಹರಿದು ಹೋಗಲು ಇರುವ ಮೋರಿಗಳಲ್ಲಿ ಹೂಳನ್ನು ತೆರವುಗೊಳಿಸಬೇಕು. ಜೊತೆಗೆ 6ನೇ ಮುಖ್ಯ ರಸ್ತೆಯಲ್ಲಿ ಕೂಡಲೆ ಕ್ರಾಸ್ ಕಲ್ವರ್ಟ್ ಅನ್ನು ನಿರ್ಮಿಸಲು ಮುಖ್ಯ ಆಯುಕ್ತರು ಶ್ರೀ ಗೌರವ್ ಗುಪ್ತ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು. 
 
ಅಮರ ಜ್ಯೋತಿ ಲೇಔಟ್‌ನಲ್ಲಿ ಮಳೆಗಾಲದ ವೇಳೆ ರಸ್ತೆಗಳಲ್ಲಿ ನೀರು ನಿಲ್ಲುವ ಸಮಸ್ಯೆಯನ್ನು ಬಗೆಹರಿಸುವ ಸಂಬಂಧ ಮುಖ್ಯ ಆಯುಕ್ತರು ಹಾಗೂ ಮಾನ್ಯ ಸ್ಥಳೀಯ ಶಾಸಕರು ಶ್ರೀ ಎನ್.ಎ.ಹ್ಯಾರೀಸ್ ರವರು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
 
ಈ ವೇಳೆ 5ನೇ ಮುಖ್ಯ ರಸ್ತೆಯ ಕರ್ನಾಟಕ ಗಾಲ್ಫ್ ಅಸೋಸಿಯೇಷನ್ ಆವರಣದಲ್ಲಿ ಸಣ್ಣ ಮೋರಿ ಇದೆ. ಈ ಪೈಕಿ ಮಳೆ ನೀರು ಸರಾಗಿ ಹರಿದು ಹೋಗಲು ಹೊಸದಾಗಿ ಮೋರಿ ನಿರ್ಮಿಸಿದಾಗ ರಸ್ತೆಗಳ ಮೇಲೆ ನಿಲ್ಲುವ ನೀರು ಸರಾಗವಾಗಿ ಹರಿದು ಹೋಗಲಿದೆ. ಆದ್ದರಿಂದ ಬೃಹತ್ ನೀರುಗಾಲುವೆ ಅಧಿಕಾರಿಗಳು ಗಾಲ್ಫ್ ಕ್ಲಬ್ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಿ ಇರುವ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಿ. ಗಾಲ್ಫ್ ಕ್ಲಬ್ ಆವರಣದಲ್ಲಿ ಗಾಲ್ಫ್ ಕ್ಲಬ್ ನವರೇ ಮೋರಿ ನಿರ್ಮಿಸಿ ಚಲ್ಲಘಟ್ಟ ಕಣಿವೆಗೆ ನೀರು ಹೋಗುವಂತೆ ಮಾಡಬೇಕು ಎಂದು ತಿಳಿಸಿದರು.
 
ಆಲ್ಬರ್ಟ್ ಸ್ಟ್ರೀಟ್ ಹಾಗೂ ರೀನಿಯಸ್ ಸ್ಟ್ರೀಟ್ ರಸ್ತೆ ತಪಾಸಣೆ:
 
ಶಾಂತಲಾನಗರ ವಾರ್ಡ್ ವ್ಯಾಪ್ತಿಯ ಆಲ್ಬರ್ಟ್ ಸ್ಟ್ರೀಟ್ ಹಾಗೂ ರೀನಿಯಸ್ ಸ್ಟ್ರೀಟ್ ರಸ್ತೆಯನ್ನು ಮುಖ್ಯ ಆಯುಕ್ತರು ಹಾಗೂ ಮಾನ್ಯ ಸ್ಥಳೀಯ ಶಾಸಕರು ಶ್ರೀ ಎನ್.ಎ.ಹ್ಯಾರೀಸ್ ರವರು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
 
ಆಲ್ಬರ್ಟ್ ಸ್ಟ್ರೀಟ್ ರಸ್ತೆ ಬದಿಯ ಮೋರಿಗಳನ್ನು ಪುನರ್ ನವೀಕರಣ ಮಾಡಿ ನೀರು ಸರಾಗವಾಗಿ ಹರಿದುಹೊಗುವಂತೆ ಮಾಡಬೇಕು. ಈ ಸಂಬಂಧ ತ್ವರಿತವಾಗಿ ಕಾಮಗಾರಿ ಪ್ರಾರಂಭಿಸಬೇಕು ಎಂದು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ವೇಳೆ ರಿಚ್ಮಂಡ್ ರಸ್ತೆ ಪಾದಚಾರಿ ಮಾರ್ಗಗಳಲ್ಲಿ ಅಳವಡಿಸಿರುವ ಸಸಿಗಳನ್ನು ಕಾಲ-ಕಾಲಕ್ಕೆ ಕಟಾವು ಮಾಡಿ ಸರಿಯಾಗಿ ನಿರ್ವಹಣೆ ಮಾಡಬೇಕು ಎಂದರು.
 
ಕೊನೆಯದಾಗಿ, ರೀನಿಯಸ್ ಸ್ಟ್ರೀಟ್ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಟೆಂಡರ್ ಶ್ಯೂರ್ ಮಾದರಿಯಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಸ್ಥಳ ಪರಿಶೀಲನೆ ನಡೆಸಿ ರಸ್ತೆ ಬದಿಯಲ್ಲಿರುವ ಮೋರಿಗಳಲ್ಲಿ ಹೂಳನ್ನು ತೆರವು ಮಾಡಿ ನಿರು ಸರಾಗವಾಗಿ ಹರಿದುಹೋಗುವಂತೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
 
ಪರಿಶೀಲನೆ ವೇಳೆ ಪೂರ್ವ ವಲಯ ಮುಖ್ಯ ಇಂಜಿನಿಯರ್ ಮೋಹನ್ ಕೃಷ್ಣ, ಬೃಹತ್ ನೀರುಗಾಲುವೆ ವಿಭಾಗದ ಮುಖ್ಯ ಇಂಜಿನಿಯರ್ ಸುಗುಣಾ, ಯೋಜನಾ ವಿಭಾಗದ ಮುಖ್ಯ ಇಂಜಿನಿಯರ್ ಲೋಕೇಶ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು
bbmp

Share this Story:

Follow Webdunia kannada

ಮುಂದಿನ ಸುದ್ದಿ

ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ಥ: ಇನ್ನೂ 5 ದಿನಗಳ ವರ್ಷಧಾರೆಯ ಮುನ್ಸೂಚನೆ