Publish Date: Mon, 11 Oct 2021 (20:13 IST)
Updated Date: Mon, 11 Oct 2021 (20:20 IST)
ಇತ್ತೀಚೆಗೆ ನಡೆದ ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆ ಫಲಿತಾಂಶವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪ್ರಕಟಿಸಿದರು.
ಈ ಬಾರಿ ಪೂರಕ ಪರೀಕ್ಷೆಗೆ 53,155 ಮಂದಿ ವಿದ್ಯಾರ್ಥಿಗಳು ನೋಂದಾಯಿಸಿದ್ದು, ಅದರಲ್ಲಿ 55.54 ಶೇಕಡಾ ವಿದ್ಯಾರ್ಥಿಗಳು ಅಂದರೆ 29,522 ಮಂದಿ ಉತ್ತೀರ್ಣರಾಗಿದ್ದಾರೆ.
ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿನಿ ಗ್ರೀಷ್ಮಾ ನಾಯಕ್ 625ಕ್ಕೆ 599 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಬಂದಿದ್ದಾರೆ. 592 ಎರಡನೇ ಅತಿ ಹೆಚ್ಚು ಅಂಕ- ಕಲಬುರಗಿ, 591- ಮೈಸೂರು ಜಿಲ್ಲೆಗೆ ಬಂದಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, 10290 ಬಾಲಕಿಯರು (57.25%) ಉತ್ತೀರ್ಣರಾದರೆ, 19232 ಬಾಲಕರು (54.66%) ಉತ್ತೀರ್ಣರಾಗಿದ್ದಾರೆ.