Publish Date: Tue, 19 Apr 2022 (06:35 IST)
Updated Date: Tue, 19 Apr 2022 (00:38 IST)
ಮಂಗಳೂರು : ತಾನು ಪ್ರೀತಿಸಿದ ಹುಡುಗಿ ಕೈಕೊಟ್ಟಳು ಎಂದು ಆರೋಪಿಸಿ ಯುವಕನೊಬ್ಬ ಮೊಬೈಲ್ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರು ಹೊರವಲಯದ ಅಡ್ಯಾರು ಎಂಬಲ್ಲಿ ಈ ಘಟನೆ ನಡೆದಿದೆ. ತಾನು ರ್ಪರೀತಿಸಿದ ಹುಡುಗಿ ನನಗೆ ಮೋಸ ಮಾಡಿದ್ದಾಳೆ. ಹೀಗಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿ ಮೊಬೈಲ್ ಟವರ್ ಏರಿ ಕುಳಿತಿದ್ದಾನೆ.
ಯುವಕನನ್ನು ಗಮನಿಸಿದ ಸ್ಥಳೀಯರು ಪೊಲಿಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಹಾಗೂ ಅಗ್ನಿಶಾಮಕದ ದಳದ ಸಿಬ್ಬಂದಿ ಯುವಕನನ್ನು ಕೆಳಗಿಳಿಸಲು ಹರಸಾಹಸ ಪಟ್ಟರು.
ಕೊನೆಗೆ ಪ್ರೀತಿಸಿದ ಹುಡುಗಿಯೇ ಬಂದು ಕರೆದ ಬಳಿಕ ಯುವಕ ಮೊಬೈಲ್ ಟವರ್ನಿಂದ ಕೆಳಗಿಳಿದಿದ್ದಾನೆ. ಟವರ್ ಇಳಿದು ತನ್ನ ಪ್ರಿಯತಮೆ ಜೊತೆ ತೆರಳಿದ್ದಾನೆ.