Select Your Language

Notifications

webdunia
webdunia
webdunia
webdunia

ಬೆಲೆ ಏರಿಕೆಯಿಂದ ಸುಸ್ತಾಗಿದ್ದ ಸಿಲಿಕಾನ್ ಸಿಟಿ ಮಂದಿಗೆ ಇದೀಗ ಆಟೋ ದರ ಬಿಸಿ

ಬೆಂಗಳೂರು ಹೊಸ ಆಟೋ ದರ

Sampriya

ಬೆಂಗಳೂರು , ಮಂಗಳವಾರ, 15 ಜುಲೈ 2025 (16:38 IST)
Photo Credit X
ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಗೆ ಇದೀಗ ಮತ್ತೊಂದು ಬೆಲೆ ಏರಿಕೆ ಬಿಸಿ ತಟ್ಟಿದೆ. ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಆಟೋರಿಕ್ಷಾಗಳ ಪ್ರಯಾಣ ದರ ಏರಿಕೆಗೆ ಕೊನೆಗೂ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಹಸಿರು ನಿಶಾನೆ ತೋರಿಸಿದ್ದಾರೆ. 

ಇನ್ಮುಂದೆ ಆಟೋ ಪ್ರಯಾಣ ಕನಿಷ್ಠ ದರವನ್ನು 30 ರೂಪಾಯಿಗಳಿಂದ 36 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.ಅದಲ್ಲದೆ ಏಕಕಾಲದಲ್ಲಿ ಮೂರು ಜನರಷ್ಟೇ ಪ್ರಯಾಣವನ್ನು ಬೆಳಸಬಹುದಾಗಿದೆ. 

ಪರಿಷ್ಕ್ರತ ದರದಂತೆ ಮೊದಲ ಎರಡು ಕಿಲೋಮೀಟರ್ ಪ್ರಯಾಣಕ್ಕೆ ಕನಿಷ್ಠ ದರ 36 ರೂಪಾಯಿಗಳಿರಲಿದೆ. ಎರಡು ಕಿಲೋಮೀಟರ್ ನಂತರದ ಪ್ರಯಾಣಕ್ಕೆ ಪ್ರತಿ ಕಿಲೋಮೀಟರ್​​ಗೆ ಈ ಮೊದಲು ಇದ್ದ ದರವನ್ನು ₹15 ನಿಂದ ₹18ಕ್ಕೆ ಹೆಚ್ಚಳ ಮಾಡಲಾಗಿದೆ. ಅಂದರೆ ಎರಡು ಕಿ.ಮೀ ನಂತರದ ಪ್ರತಿ ಕಿಲೋಮೀಟರ್ ಪ್ರಯಾಣಕ್ಕೆ 3 ರೂಪಾಯಿ ದರ ಏರಿಸಲಾಗಿದೆ.

ಆಟೋ ಸಂಘಟನೆಗಳು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಬಿಬಿಎಂಪಿ ವ್ಯಾಪ್ತಿಗೆ ಒಳಪಡುವಂತೆ ಹೊಸ ಪ್ರಯಾಣ ದರವನ್ನು ಘೋಷಣೆ ಮಾಡಿದ್ದಾರೆ. ಆಗಸ್ಟ್ 1 ರಿಂದ ಹೊಸ ದರ ಅನ್ವಯವಾಗಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ಶುಭಾಂಶು ಶುಕ್ಲ ಭೂಮಿಗಿಳಿಯುತ್ತಿದ್ದಂತೇ ಗಳ ಗಳನೇ ಕಣ್ಣೀರಿಟ್ಟ ತಾಯಿ: ವಿಡಿಯೋ