ಟಿಪ್ಪು ಸುಲ್ತಾನ್ ಜಯಂತಿ: ಕಲಂ 144 ಜಾರಿ

ಶುಕ್ರವಾರ, 9 ನವೆಂಬರ್ 2018 (19:02 IST)
ಮೈಸೂರು ಹುಲಿ ಖ್ಯಾತಿಯ ಟಿಪ್ಪು ಸುಲ್ತಾನ್ ಜಯಂತಿ ಹಿನ್ನೆಲೆಯಲ್ಲಿ ವಿರೋಧ ವ್ಯಕ್ತವಾಗುತ್ತಿರುವ ಕಾರಣ ಸಿಆರ್ ಪಿಸಿ ಕಲಂ 144 ಜಾರಿ ಮಾಡಲಾಗಿದೆ.

ಹುಬ್ಬಳ್ಳಿ – ಧಾರವಾಡ ಮಹಾನಗರದಲ್ಲಿ ಸಿ.ಆರ್.ಪಿ.ಸಿ. ಕಲಂ 144 ಜಾರಿಗೊಳಿಸಿ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ ಆದೇಶ ಹೊರಡಿಸಿದ್ದಾರೆ.

ಹುಬ್ಬಳ್ಳಿ – ಧಾರವಾಡ ಅವಳಿನಗರಗಳಲ್ಲಿ ನ. 10 ರಿಂದ ನ. 11 ರ ಬೆಳಗ್ಗೆ 6 ಗಂಟೆವರೆಗೆ 144 ಕಲಂ ಜಾರಿಯಲ್ಲಿರಲಿದೆ. ಟಿಪ್ಪು ಸುಲ್ತಾನ್ ಜಯಂತಿ ವಿರೋಧಿಸಿ ವಿವಿಧ ಸಂಘಟನೆಗಳು ಮೆರವಣಿಗೆ ನಡೆಸುವ ಸಾಧ್ಯತೆ ಇರುವುದರಿಂದ ಪೊಲೀಸ್ ಇಲಾಖೆ ಈ ಕ್ರಮ ಕೈಗೊಂಡಿದೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನೋಟು ಅಮಾನ್ಯಕ್ಕೆ 2 ವರ್ಷ: ಕಾಂಗ್ರೆಸ್ ಖಂಡನೆ