ಸಿಎಂ ಕುಮಾರಸ್ವಾಮಿ ಗಂಡೂ ಅಲ್ಲ, ಹೆಣ್ಣೂ ಅಲ್ಲ - ನಳಿನ್​ ಕುಮಾರ್ ಕಟೀಲ್ ವ್ಯಂಗ್ಯ

ಶುಕ್ರವಾರ, 9 ನವೆಂಬರ್ 2018 (13:35 IST)
ಮಂಗಳೂರು : ಸಿಎಂ ಕುಮಾರಸ್ವಾಮಿ ಗಂಡೂ ಅಲ್ಲ, ಹೆಣ್ಣೂ ಅಲ್ಲ ಎಂದು ದಕ್ಷಿಣ ಕನ್ನದ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ನಳಿನ್​ ಕುಮಾರ್ ಕಟೀಲ್​ ಅವರು ವಿವಾದತ್ಮಕ ಹೇಳಿಕೆ ನೀಡಿದ್ದಾರೆ.


ಇಂದು ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಮತಾಂಧ ಟಿಪ್ಪುವಿನ ಜಯಂತಿಯನ್ನು ಸಿದ್ದರಾಮಯ್ಯ ಆಚರಣೆ ಮಾಡಿದರು. ಹೀಗಾಗಿ ಕುಮಾರಸ್ವಾಮಿ ಟಿಪ್ಪುವಿನ ಬದಲು ಸಿದ್ದರಾಮಯ್ಯ ಜಯಂತಿ ಮಾಡಬಹುದಾಗಿತ್ತು ಎಂದು ವ್ಯಂಗ್ಯವಾಡಿದ್ದಾರೆ.


ಅಲ್ಲದೇ  ಟಿಪ್ಪು ಜಯಂತಿ ಮಾಡಿ ಸಿದ್ದರಾಮಯ್ಯ ಮಾಜಿ ಆದರು. ಈಗ ಕುಮಾರಸ್ವಾಮಿ ಕಾಡಿಗೆ ಹೋಗಲಿದ್ದಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಏರ್ಟೆಲ್ ನಿಂದ ಗ್ರಾಹಕರಿಗೆ 5 ಭರ್ಜರಿ ಹೊಸ ಪ್ರಿಪೇಡ್ ಆಫರ್ ಗಳು