ಮೂರು ದಿನ ಸಿಎಂ ಕುಮಾರಸ್ವಾಮಿಗೆ ರೆಸ್ಟ್: ಟಿಪ್ಪು ಜಯಂತಿಗೆ ಗೈರು

ಶುಕ್ರವಾರ, 9 ನವೆಂಬರ್ 2018 (09:29 IST)
ಬೆಂಗಳೂರು: ಉಪಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿ ಬಳಲಿದ ಸಿಎಂ ಕುಮಾರಸ್ವಾಮಿ ವೈದ್ಯರ ಸಲಹೆ ಮೇರೆಗೆ ಇಂದಿನಿಂದ ಮೂರು ದಿನಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ.
 

ಮೈಸೂರಿನ ಖಾಸಗಿ ಸ್ಥಳದಲ್ಲಿ ಸಿಎಂ ಕುಮಾರಸ್ವಾಮಿ ರಾಜಕೀಯದ ಹಂಗು ಇಲ್ಲದೇ ಆರಾಮವಾಗಿ ಮೂರು ದಿನ ವಿಶ್ರಾಂತಿ ಪಡೆಯಲಿದ್ದಾರೆ. ಇಂದು ಬೆಳಿಗ್ಗೆಯೇ ಖಾಸಗಿ ಸ್ಥಳಕ್ಕೆ ಸಿಎಂ ತೆರಳಿದ್ದಾರೆ.

ಸಿಎಂ ಜತೆ ಪತ್ನಿ ಅನಿತಾ ಕುಮಾರಸ್ವಾಮಿ ಮತ್ತು ಪುತ್ರ ನಿಖಿಲ್ ಗೌಡ ಕೂಡಾ ತೆರಳಿದ್ದಾರೆ. ಚುನಾವಣಾ ಪ್ರಚಾರದ ಹಿನ್ನಲೆಯಲ್ಲಿ ಆರೋಗ್ಯ ಹದಗಡೆದಂತೆ ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದರು. ಹೀಗಾಗಿ ವಿಧಾನಸೌಧದಲ್ಲಿ ನಡೆಸಲುದ್ದೇಶಿಸಿರುವ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಸಿಎಂ ಗೈರು ಹಾಜರಾಗಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮಾಟ ಮಂತ್ರ ಮಾಡಿದ್ದೀಯಾ ಎಂದು ಅಜ್ಜಿಗೆ ಮೊಮ್ಮಗ ಮಾಡಿದ್ದೇನು ಗೊತ್ತಾ?