Select Your Language

Notifications

webdunia
webdunia
webdunia
webdunia

ಮಾಟ ಮಂತ್ರ ಮಾಡಿದ್ದೀಯಾ ಎಂದು ಅಜ್ಜಿಗೆ ಮೊಮ್ಮಗ ಮಾಡಿದ್ದೇನು ಗೊತ್ತಾ?

ಮಾಟ ಮಂತ್ರ ಮಾಡಿದ್ದೀಯಾ ಎಂದು ಅಜ್ಜಿಗೆ ಮೊಮ್ಮಗ ಮಾಡಿದ್ದೇನು ಗೊತ್ತಾ?
ಮುಂಬೈ , ಶುಕ್ರವಾರ, 9 ನವೆಂಬರ್ 2018 (09:05 IST)
ಮುಂಬೈ: ಅಜ್ಜಿ ತನಗೆ ಮಾಟ ಮಂತ್ರ ಮಾಡಿದ್ದಾಳೆಂದು ಅನುಮಾನಿಸಿ ಮೊಮ್ಮಗನೊಬ್ಬ ಚಾಕುವಿನಿಂದ ಇರಿದು ಹಲ್ಲೆ ಮಾಡಿದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

ವಸಂತ್ ಗುತ್ತೆ ಎಂಬಾತ ತನ್ನ ಅಜ್ಜಿ ಸಾಕು ಗುತ್ತೆ (55) ಮನೆಗೆ ತೆರಳಿ ಈ ಕೃತ್ಯವೆಸಗಿದ್ದಾನೆ. ಮಾಟ ಮಂತ್ರ ಮಾಡಿದ್ದೀಯಾ ಎಂದು ಅಜ್ಜಿಯನ್ನು ಪ್ರಶ್ನಿಸಿದ ಮೊಮ್ಮಗ ವಸಂತ್ ಆಕೆ ನಿರಾಕರಿಸಿದಾಗ ತಲೆಗೆ ಚಾಕುವಿನಿಂದ ತಿವಿದಿದ್ದಾನೆ.

ಇವರ ಗಲಾಟೆಯನ್ನು ತಡೆಯಲು ಬಂದ ಅಜ್ಜಿಯ ಸೊಸೆಯ ಮೇಲೂ ಆರೋಪಿ ವಸಂತ್ ಹಲ್ಲೆ ಮಾಡಿದ್ದಾನೆ. ಈ ಸಂಬಂಧ ಇದೀಗ ಪೊಲೀಸರು ಆರೋಪಿ ವಸಂತ್ ನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಮುತ್ಸುದ್ದಿ ಎಲ್ ಕೆ ಅಡ್ವಾಣಿಗೆ ಶುಭ ಕೋರಿದ ಸಿದ್ದರಾಮಯ್ಯ