ಟಿಪ್ಪು ಜಯಂತಿಗೂ ಬಿಜೆಪಿಗೂ ಯಾವದೇ ಸಂಬಂಧವಿಲ್ಲ ಎಂದ ಮುಖಂಡ

ಶುಕ್ರವಾರ, 9 ನವೆಂಬರ್ 2018 (17:15 IST)
ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಣೆಗೆ ಮುಂದಾಗುತ್ತಿದ್ದಂತೆಯೆ ರಾಜ್ಯ ಸರ್ಕಾರ  ಹಿಂದು ಮುಸ್ಲಿಮ್ ಮಧ್ಯೆ ಜಗಳ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಮುಖಂಡ ದೂರಿದ್ದಾರೆ.

ಟಿಪ್ಪು ಜಯಂತಿ ಆಚರಣೆ ವಿಚಾರ ಹಿನ್ನೆಲೆಯಲ್ಲಿ ಕೆ. ಎಸ್. ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಟಿಪ್ಪು ಜಯಂತಿಗೂ ಬಿಜೆಪಿಗೂ ಯಾವದೇ ಸಂಬಂಧವಿಲ್ಲ. ರಾಜ್ಯ ಸರ್ಕಾರ  ಹಿಂದು ಮುಸ್ಲಿಮ್ ಮಧ್ಯೆ ಜಗಳ ಹಚ್ಚುವ ಕೆಲಸ ಮಾಡುತ್ತಿದೆ ಎಂದು ದೂರಿದರು.  
ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಆಚರಿಸಲ್ಲ ಎಂದಿದ್ದ ಕುಮಾರಸ್ವಾಮಿ, ಈಗ ಮಾತು ತಪ್ಪಿದ್ದಾರೆ. ಟಿಪ್ಪು ಜಯಂತಿ ಆಚರಣೆ ಮಾಡಿ ಸಿದ್ದರಾಮಯ್ಯ ಕೆಟ್ಟರು, ವಿಜಯ ಮಲ್ಯ  ಹಾಳಾಗೋದ, ಈಗ ಕುಮಾರಸ್ವಾಮಿ ಕೂಡ ಹಾಳಾಗುತ್ತಾರೆ  ಎಂದರು.

ಟಿಪ್ಪು ಜಯಂತಿಯನ್ನು ನಾನು ವಿರೋಧಿಸುತ್ತೆನೆ ಎಂದು ಕೆ. ಎಸ್. ಈಶ್ವರಪ್ಪ ಹೇಳಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಹಾರೂಗೇರಿ ಪಟ್ಟಣದ ಖಾಸಗಿ ಕಾರ್ಯಕ್ರಮದಲ್ಲಿ  ಕೆ. ಎಸ್. ಈಶ್ವರಪ್ಪ ಮಾಧ್ಯಮಗಳಿಗೆ  ಈ ಹೇಳಿಕೆ ನೀಡಿದ್ದಾರೆ.ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪಟಾಕಿಗೆ ದೃಷ್ಠಿಹೀನನಾದ ಬಾಲಕ