ಪಟಾಕಿಗೆ ದೃಷ್ಠಿಹೀನನಾದ ಬಾಲಕ

ಶುಕ್ರವಾರ, 9 ನವೆಂಬರ್ 2018 (16:59 IST)
ಬೆಳಕಿನ ಹಬ್ಬ ದೀಪಾವಳಿ ಸಡಗರದಲ್ಲಿ ಪಟಾಕಿಯ ಕಿಡಿ ತಗುಲಿದ ಪರಿಣಾಮ ಬಾಲಕನೊಬ್ಬನ ಕಣ್ಣಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ.

ಬೆಂಗಳೂರಿನ ದೇವನಹಳ್ಳಿಯ ಜೋಗಿಹಳ್ಳಿಗೆ ಕೂಲಿ ಅರಸಿ ಬಂದಿದ್ದ ಕಲಬುರಗಿ ಮೂಲದ ಆಯಲಮ್ಮ ಅವರ ಪುತ್ರರಾದ ಮೌನೇಶ ಮತ್ತು ವಸುನಾಥ್ ಬೇರೆಯವರು ಕೊಟ್ಟಿದ್ದ ಪಟಾಕಿ ಸಿಡಿಸಲು ಹೋಗಿ ಮೌನೇಶ ಕಣ್ಣಿಗೆ ಗಾಯವಾದರೆ ವಸುನಾಥ್ ಕೈ ಸುಟ್ಟುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ.

ಕಣ್ಣಿಗೆ ಹಾನಿ ಮಾಡಿಕೊಂಡಿರುವ ಮೌನೇಶ್ ಗೆ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸಿಎಂ ಕುಮಾರಸ್ವಾಮಿ ಗಂಡೂ ಅಲ್ಲ, ಹೆಣ್ಣೂ ಅಲ್ಲ - ನಳಿನ್​ ಕುಮಾರ್ ಕಟೀಲ್ ವ್ಯಂಗ್ಯ