Select Your Language

Notifications

webdunia
webdunia
webdunia
Sunday, 13 April 2025
webdunia

ದೀಪಾವಳಿ ಹಬ್ಬಕ್ಕೆ ಹೊಡೆದ ಪಟಾಕಿಗೆ ಸೋಫಾ ತಯಾರಿಕ ಘಟಕ ಭಸ್ಮ

ದೀಪಾವಳಿ
ಬೆಂಗಳೂರು , ಗುರುವಾರ, 8 ನವೆಂಬರ್ 2018 (15:19 IST)
ದೀಪಾವಳಿ ಹಬ್ಬದ ಹಿನ್ನೆಲೆ ಹೊಡೆದ ಪಟಾಕಿಯು ಮೂರನೇ ಮಹಡಿಯ ಸೋಫಾ ಸೆಟ್ ತಯಾರಿಕಾ ಗೋದಾಮಿಗೆ  ಬಿದ್ದ ಪರಿಣಾಮ ಲಕ್ಷಾಂತರ ರೂ. ನಷ್ಟ ಸಂಭವಿಸಿದ ಘಟನೆ ನಡೆದಿದೆ.

ಪಟಾಕಿಯ ಬೆಂಕಿಯ ಕಿಡಿಯಿಂದ ಸಾಕಷ್ಟು ಬೆಲೆ ಬಾಳುವ ವಸ್ತುಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬನಹಳ್ಳಿಯಲ್ಲಿ ನಡೆದಿದೆ. ಇನ್ನು ಈ ಸೋಪಾ ಸೆಟ್ ತಯಾರಿಕಾ ಗೋದಾಮು ಕೇರಳ ಮೂಲದ ಶಾಜಿ ಎನ್ನುವವರಿಗೆ ಸೇರಿದ್ದಾಗಿದ್ದು, ಪಟಾಕಿಯನ್ನು ಹೊಡೆಯುವ ಸಂದರ್ಭದಲ್ಲಿ ಪಟಾಕಿಯ ಕಿಡಿಯು ಮೂರನೇ ಮಹಡಿಯಲ್ಲಿದ್ದ ಸೋಫಾ ಸೆಟ್ ತಯಾರಿಕ ಸಾಮಗ್ರಿಗಳಿಗೆ ತಗುಲಿದೆ.

ಹೀಗಾಗಿ ಬೆಲೆ ಬಾಳುವ ವಸ್ತುಗಳು ಅಗ್ನಿಗೆ ಆಹುತಿಯಾಗಿದ್ದು, ಮೂರು ಅಂತಸ್ತಿನ ಕಟ್ಟಡಕ್ಕೆ ಸಂಪೂರ್ಣ ಬೆಂಕಿ ಅವರಿಸಿದೆ. ಮೂರನೇ ಮಹಡಿಯಲ್ಲಿದ್ದ ನಾಲ್ವರನ್ನು ಸ್ಥಳೀಯರ ಸಹಾಯದಿಂದ  ಹಗ್ಗದ ಮೂಲಕ ರಕ್ಷಣೆ ಮಾಡಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.  

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಎರಡು ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಮೂರು ಗಂಟೆಗಳಿಂದ ಬೆಂಕಿಯನ್ನು ನಂದಿಸುವ ಕಾರ್ಯ ಮಾಡಿದರು. ಬೆಂಕಿಯು ಹತೋಟಿಗೆ ಬರದೆ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟರು.  ಈ ಕುರಿತು ಸೂರ್ಯ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ದೀಪಾವಳಿ ಹಬ್ಬದಂದು ಮತ್ತೆ ಇಳಿದ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ