ವಿವಾದದ ಬಳಿಕ ಭಾರತ ಬಿಟ್ಟು ತೊಲಗಿ ಕಾಮೆಂಟ್ ಗೆ ಸ್ಪಷ್ಟನೆ ನೀಡಿದ ವಿರಾಟ್ ಕೊಹ್ಲಿ

ಶುಕ್ರವಾರ, 9 ನವೆಂಬರ್ 2018 (09:59 IST)
ಮುಂಬೈ: ಅಭಿಮಾನಿಯೊಬ್ಬ ಭಾರತೀಯ ಕ್ರಿಕೆಟಿಗರನ್ನು ಇಷ್ಟಪಡಲ್ಲ ಎಂದಿದ್ದಕ್ಕೆ ಭಾರತ ಬಿಟ್ಟು ತೊಲಗಿ ಎಂದು ಕಾಮೆಂಟ್ ಮಾಡಿದ್ದ ವಿರಾಟ್ ಕೊಹ್ಲಿ ಇದೀಗ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಯೊಬ್ಬ ನನಗೆ ಭಾರತೀಯ ಕ್ರಿಕೆಟಿಗರಿಗಿಂತ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಆಟಗಾರರ ಆಟ ಇಷ್ಟ ಎಂದಿದ್ದರು. ಈ ಅಭಿಮಾನಿಗೆ ಕೊಹ್ಲಿ ಹಾಗಿದ್ದರೆ ನಿಮಗೆ ಭಾರತದಲ್ಲಿ ಇರಲು ಯೋಗ್ಯತೆ ಇಲ್ಲ ಎಂದು ಪ್ರತಿಕ್ರಿಯಿಸಿದ್ದರು.

ಕೊಹ್ಲಿಯ ಈ ಹೇಳಿಕೆ ಭಾರೀ ವಿವಾದಕ್ಕೊಳಗಾಗಿತ್ತು. ವಿವಾದದ ಬಳಿಕ ಇದೀಗ ಕೊಹ್ಲಿ ಟ್ವಿಟರ್ ನಲ್ಲಿ ಸ್ಪಷ್ಟನೆ ಕೊಟ್ಟಿದ್ದು, ‘ಟ್ರೋಲ್ ಮಾಡಿದ್ದು ನನಗೆ ಅಲ್ಲ ಎಂದುಕೊಳ್ಳುತ್ತೇನೆ. ನನಗೆ ಟ್ರೋಲ್ ಅಭ್ಯಾಸವಾಗಿದೆ. ನಾನು ‘ಈ ಭಾರತೀಯರು’ ತಮ್ಮ ಕಾಮೆಂಟ್ ನಲ್ಲಿ ಹೇಗೆ ಹೇಳಿದರು ಎಂಬುದನ್ನು ಹೇಳಿದೆ ಅಷ್ಟೆ. ನಾನೂ ಆಯ್ಕೆ ಸ್ವಾತಂತ್ರ್ಯದ ಪರವಾಗಿದ್ದೇನೆ. ಇದನ್ನು ಹಗುರವಾಗಿ ಪರಿಗಣಿಸಿ ಸ್ನೇಹಿತರೇ ಮತ್ತು ಹಬ್ಬದ ಸಂಭ್ರಮವನ್ನು ಎಂಜಾಯ್ ಮಾಡಿ. ಎಲ್ಲರಿಗೂ ಪ್ರೀತಿ ಮತ್ತು ಶಾಂತಿಯಿರಲಿ’ ಎಂದು ಕೊಹ್ಲಿ ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಆಸ್ಟ್ರೇಲಿಯಾ ಸರಣಿಗೆ ಪೃಥ್ವಿ ಶಾರನ್ನು ತಯಾರು ಮಾಡಲು ಸ್ವತಃ ಸಚಿನ್ ತೆಂಡುಲ್ಕರ್ ಮಾಡಿದ ಪ್ಲ್ಯಾನ್ ಏನು?!