Publish Date: Fri, 09 Nov 2018 (08:57 IST)
Updated Date: Fri, 09 Nov 2018 (08:59 IST)
ಮುಂಬೈ: ಕ್ರಿಕೆಟ್ ಅಭಿಮಾನಿಯೊಬ್ಬರಿಗೆ ಟೀಂ ಇಂಡಿಯಾ ಕ್ರಿಕೆಟಿಗರನ್ನು ಇಷ್ಟಪಡದ ಮೇಲೆ ಈ ದೇಶದಲ್ಲಿ ಇರಬೇಡಿ ಎಂದಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಬಹುಭಾಷಾ ನಟ ಸಿದ್ಧಾರ್ಥ್ ತಕ್ಕ ತಿರುಗೇಟು ನೀಡಿದ್ದಾರೆ.
‘ಬಾಯ್ಸ್’, ‘ರಂಗ್ ದೇ ಬಸಂತಿ’ ಸಿನಿಮಾ ಖ್ಯಾತಿಯ ನಟ ಸಿದ್ಧಾರ್ಥ್ ವಿರಾಟ್ ಕೊಹ್ಲಿಯ ಕಾಮೆಂಟ್ ಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದು, ದ್ರಾವಿಡ್ ನೋಡಿ ಕಲಿಯಿರಿ ಎಂದಿದ್ದಾರೆ.
‘ನೀವು ಕಿಂಗ್ ಕೊಹ್ಲಿ ಆಗಿಯೇ ಮುಂದುವರಿಯಬೇಕೆಂದಿದ್ದರೆ ಈ ಸಂದರ್ಭದಲ್ಲಿ ‘ದ್ರಾವಿಡ್ ಆಗಿದ್ದರೆ ಏನು ಹೇಳುತ್ತಿದ್ದರು?’ ಎಂದು ಚಿಂತಿಸಿ ಮಾತನಾಡಬೇಕಾದ ಸಮಯ ಬಂದಿದೆ. ಒಬ್ಬ ಭಾರತೀಯ ನಾಯಕನಿಂದ ಎಂಥಾ ಮೂರ್ಖತನದ ಕಾಮೆಂಟ್’ ಎಂದು ಸಿದ್ಧಾರ್ಥ್ ಟ್ವಿಟರ್ ನಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಸಾಮಾಜಿಕ ಜಾಲತಾಣವೊಂದರಲ್ಲಿ ಪ್ರಶ್ನೋತ್ತರ ಸಂದರ್ಭದಲ್ಲಿ ಅಭಿಮಾನಿಯೊಬ್ಬರು, ನೀವು ಒಬ್ಬ ಸಾಧಾರಣ ಬ್ಯಾಟ್ಸ್ ಮನ್ ನಂತೆ ಕಾಣುತ್ತೀರಿ. ನನಗೆ ಭಾರತೀಯರಿಗಿಂತ ಆಸ್ಟ್ರೇಲಿಯಾ, ಇಂಗ್ಲೆಂಡ್ ಕ್ರಿಕೆಟಿಗರ ಆಟ ಇಷ್ಟ ಎಂದಿದ್ದರು. ಇದಕ್ಕೆ ಕೊಹ್ಲಿ ಹಾಗಿದ್ದರೆ ನೀವು ಭಾರತದಲ್ಲಿ ಇರಲು ಲಾಯಕ್ಕಿಲ್ಲ ಎಂದು ತಿರುಗೇಟು ನೀಡಿದ್ದರು. ಕೊಹ್ಲಿಯ ಈ ಕಾಮೆಂಟ್ ಭಾರೀ ವಿವಾದಕ್ಕೊಳಗಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.