ವಿರಾಟ್ ಕೊಹ್ಲಿಯನ್ನೇ ಓವರ್ ಟೇಕ್ ಮಾಡಿದ ರೋಹಿತ್ ಶರ್ಮಾ

ಬುಧವಾರ, 7 ನವೆಂಬರ್ 2018 (08:49 IST)
ಲಕ್ನೋ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ದ್ವಿತೀಯ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಹಂಗಾಮಿ ನಾಯಕ ರೋಹಿತ್ ಶರ್ಮಾ, ಕ್ಯಾಪ್ಟನ್ ವಿರಾಟ್ ಕೊಹ್ಲಿಯ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಟಿ20 ಪಂದ್ಯಗಳಲ್ಲಿ ಭಾರತದ ಪರ ಅತೀ ಹೆಚ್ಚು ರನ್ ಗಳಿಸಿದ ದಾಖಲೆ ಇದುವರೆಗೆ ಕೊಹ್ಲಿ ಹೆಸರಿನಲ್ಲಿತ್ತು. ಕೊಹ್ಲಿ ಒಟ್ಟು 62 ಪಂದ್ಯಗಳಿಂದ 2102 ರನ್ ಗಳಿಸಿ ಗರಿಷ್ಠ ರನ್ ಸ್ಕೋರರ್ ಎನಿಸಿದ್ದರು.

ಆದರೆ ಇದೀಗ ರೋಹಿತ್ ಆ ದಾಖಲೆ ಮುರಿದಿದ್ದು, ಒಟ್ಟು 86 ಪಂದ್ಯಗಳಿಂದ  ಕೊಹ್ಲಿ ದಾಖಲೆ ಮುರಿದು ಭಾರತದ ಪರ ಟಿ20 ಪಂದ್ಯಗಳಲ್ಲಿ ಅತೀ ಹೆಚ್ಚು ರನ್ ಗಳಿಸಿದ ದಾಖಲೆ ಮಾಡಿದ್ದಾರೆ. ವಿಶೇಷವೆಂದರೆ ಕೊಹ್ಲಿ ಇದುವರೆಗೆ ಟಿ20 ಪಂದ್ಯಗಳಲ್ಲಿ ಶತಕ ಬಾರಿಸಿಲ್ಲ. ಆದರೆ ರೋಹಿತ್ 4 ಶತಕ ಗಳಿಸಿದ್ದಾರೆ. ಈ ಮೂಲಕ ಭಾರತದ ಪರ ಟಿ20 ಪಂದ್ಯಗಳಲ್ಲಿ ಗರಿಷ್ಠ ಶತಕ ಗಳಿಸಿದ ದಾಖಲೆಯೂ ಅವರದ್ದಾಗಿದೆ. ಜತೆಗೆ ಒಬ್ಬ ನಾಯಕನಾಗಿ ಟಿ20 ಪಂದ್ಯಗಳಲ್ಲಿ ಎರಡು ಶತಕ ಗಳಿಸಿದ ಮೊದಲ ನಾಯಕ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ವಾಜಪೇಯಿ ಕ್ರೀಡಾಂಗಣಕ್ಕೆ ಭರ್ಜರಿ ಓಪನಿಂಗ್ ನೀಡಿದ ಟೀಂ ಇಂಡಿಯಾ