ಆಸ್ಟ್ರೇಲಿಯಾ ಸರಣಿಗೆ ಪೃಥ್ವಿ ಶಾರನ್ನು ತಯಾರು ಮಾಡಲು ಸ್ವತಃ ಸಚಿನ್ ತೆಂಡುಲ್ಕರ್ ಮಾಡಿದ ಪ್ಲ್ಯಾನ್ ಏನು?!

ಶುಕ್ರವಾರ, 9 ನವೆಂಬರ್ 2018 (09:01 IST)
ಮುಂಬೈ: ತಮ್ಮನ್ನೇ ಹೋಲುವ ಯುವ ಸೆನ್ಸೇಷನ್ ಪೃಥ್ವಿ ಶಾರನ್ನು ಮುಂಬರುವ ಆಸ್ಟ್ರೇಲಿಯಾ ಟೆಸ್ಟ್ ಸರಣಿಗೆ ತಯಾರುಗೊಳಿಸಲು ಸ್ವತಃ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಮೈದಾನಕ್ಕಿಳಿದಿದ್ದಾರೆ.

ಸಾಮಾನ್ಯವಾಗಿ ತೆಂಡುಲ್ಕರ್ ಯುವ ಆಟಗಾರರಿಗೆ ಸಲಹೆ ಕೊಡುತ್ತಿರುತ್ತಾರೆ. ಆದರೆ ಬಾಲ್ ಕೈಯಲ್ಲಿ ಹಿಡಿದು ಅಭ್ಯಾಸ ಮಾಡಿಸುವುದು ಕಡಿಮೆ. ಆದರೆ ಪೃಥ್ವಿ ಶಾ ಆಟ ನೋಡಿ ಇಂಪ್ರೆಸ್ ಆಗಿರುವ ತೆಂಡುಲ್ಕರ್ ಈಗಷ್ಟೇ ಗಾಯದಿಂದ ಚೇತರಿಸಿಕೊಂಡು ಅಭ್ಯಾಸ ಆರಂಭಿಸಿರುವ ಯುವ ಆಟಗಾರನಿಗೆ ತಾವೇ ಬಾಲ್ ಎಸೆದು ಅಭ‍್ಯಾಸ ಮಾಡಿಸುತ್ತಿದ್ದಾರೆ.

ತೆಂಡುಲ್ಕರ್ ಒದ್ದೆ ರಬ್ಬರ್ ಬಾಲ್ ಎಸೆದು ಪೃಥ್ವಿ ಶಾಗೆ ಅಭ್ಯಾಸ ಮಾಡಿಸಿದರು. ಅಷ್ಟೇ ಅಲ್ಲ, ಆಸ್ಟ್ರೇಲಿಯಾದಲ್ಲಿ ಹೇಗೆ ಆಡಬೇಕೆಂದು ಕೆಲವು ಸಲಹೆ ಸೂಚನೆಗಳನ್ನು ನೀಡಿದರು. ಸ್ವತಃ ಕ್ರಿಕೆಟ್ ದೇವರ ಸಲಹೆ ಸಿಕ್ಕ ಮೇಲೆ ಪೃಥ್ವಿ ಶಾ ಆಸ್ಟ್ರೇಲಿಯಾದಲ್ಲಿ ಹೇಗೆ ಆಡುತ್ತಾರೆ ಕಾದು ನೋಡಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಭಾರತ ಬಿಟ್ಟು ತೊಲಗಿ ಎಂದ ವಿರಾಟ್ ಕೊಹ್ಲಿ ದ್ರಾವಿಡ್ ನೋಡಿ ಕಲಿಯಿರಿ ಎಂದವರು ಯಾರು ಗೊತ್ತೇ?