Select Your Language

Notifications

webdunia
webdunia
webdunia
webdunia

ಕುತ್ತಿಗೆಯಿಂದ ಹೊರಬರುತ್ತಿವೆ ಮೊಟ್ಟೆ: ವಿಚಿತ್ರ ಕೋಳಿ ವೈರಲ್

ಕುತ್ತಿಗೆಯಿಂದ ಹೊರಬರುತ್ತಿವೆ ಮೊಟ್ಟೆ: ವಿಚಿತ್ರ ಕೋಳಿ ವೈರಲ್
ಮಂಡ್ಯ , ಶನಿವಾರ, 27 ಜುಲೈ 2019 (14:23 IST)
ಸಾಮಾನ್ಯವಾಗಿ ಹಿಂಬದಿಯಿಂದ ಮೊಟ್ಟೆ ಇಡೋ ಕೋಳಿಗಳನ್ನು ನಾವು ನೀವೆಲ್ಲ ನೋಡಿದ್ದೇವೆ. ಆದರೆ ಇಲ್ಲಿರೋ ಕೋಳಿ ಮಾತ್ರ ದೇಹದ ಇತರ ಅಂಗದಿಂದ ಮೊಟ್ಟೆ ಇಡುತ್ತಾ ಸುದ್ದಿ ಆಗಿದೆ.

ಮಂಡ್ಯ ಜಿಲ್ಲೆ ನಾಗಮಂಗಲ ಪಟ್ಟಣದಲ್ಲಿ ವಿಚಿತ್ರ ಘಟನೆ ನಡೆಯುತ್ತಿದೆ. ಕುತ್ತಿಗೆ ಭಾಗದಲ್ಲಿ ಮೊಟ್ಟೆ ಇಡುವ ಕೋಳಿ ಗಮನ ಸೆಳೆಯುತ್ತಿದೆ.  

ನಾಗಮಂಗಲ ಪಟ್ಟಣದ ಹೇಮಾವತಿ ಬಡಾವಣೆಯ ಕಾಲಜ್ಞಾನಿ ಪುಸ್ತಕ ಬರೆಯುವುದರಲ್ಲಿ ಹೆಸರು ವಾಸಿಯಾಗಿರುವ ಬರಹಗಾರ ಶಿವರಾಮೇಗೌಡ ಅವರ ಮನೆಯಲ್ಲಿ ಅಪರೂಪದ ಘಟನೆ ನಡೆದಿದೆ.

webdunia
ಸುಮಾರು ಎರಡು ವರ್ಷಗಳಿಂದ ತಮ್ಮ ಮನೇಲಿ ಸಾಕಿಕೊಂಡಿದ್ದ ಕೋಳಿ ಹಲವು ಬಾರಿ ಮೊಟ್ಟೆಗಳನ್ನು ಇಟ್ಟು ಮರಿಗಳನ್ನು ಮಾಡಿತ್ತು. ಆದರೆ ಇಂದು ಕುತ್ತಿಗೆ ಭಾಗದಿಂದ ಮೊಟ್ಟೆಗಳನ್ನು ಇಡುವುದನ್ನು ನೋಡಿದ ಮನೆಯವರು ಆಸಕ್ತರಾಗಿದ್ದಾರೆ.

ನಂತರ ಅದರ ವಿಡಿಯೋವನ್ನು ಮಾಡಿ  ಆಶ್ಚರ್ಯ ಪಟ್ಟಿದ್ದಾರೆ. ಹಲವು ವರ್ಷಗಳಿಂದ ತಮ್ಮ ಪಾಡಿಗೆ ತಾವು ಜಗತ್ತಿಗೆ ಸಂದೇಶ ಹೇಳುವ 15ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದು ವ್ಯವಸಾಯ ಮಾಡಿಕೊಂಡಿದ್ದ ಶಿವರಾಮೇಗೌಡರ ಮನೆಯಲ್ಲಿ ಇಂತಹ ಘಟನೆ ನಡೆದಿರುವುದು ಸಾರ್ವಜನಿಕರಲ್ಲಿ ಆಶ್ಚರ್ಯ ಮತ್ತು ಕುತೂಹಲಕ್ಕೆ ಕಾರಣವಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಬೆಟ್ಟದ ದೇವಾಲಯದಲ್ಲಿ ತಡರಾತ್ರಿ ಮಾಡಿದ್ದೇನು?