Publish Date: Thu, 04 Oct 2018 (15:27 IST)
Updated Date: Thu, 04 Oct 2018 (15:29 IST)
ಹುಲಿ ಚರ್ಮ ಮಾರಾಟಕ್ಕೆ ಯತ್ನಿಸಿದವನನ್ನು ಬಂಧನ ಮಾಡಲಾಗಿದೆ.
ಅರಣ್ಯ ಸಂಚಾರಿ ದಳ ಸಿಬ್ಬಂದಿಗಳ ಕಾರ್ಯಚರಣೆ ನಡೆಸಿದ ವೇಳೆಯಲ್ಲಿ ಹುಲಿ ಚರ್ಮ ಮಾರಾಟಕ್ಕೆ ಯತ್ನಿಸಿದವನನ್ನು ಬಂಧನ ಮಾಡಲಾಗಿದೆ.
ಅರಣ್ಯ ಸಂಚಾರಿ ದಳದ ಡಿಸಿಎಫ್ ಪೂವಯ್ಯ ನೇತೃತ್ವದಲ್ಲಿ ಕಾರ್ಯಾಚರಣೆ ಇದಾಗಿದೆ. ಮೈಸೂರಿನ ಇಲವಾಲದ ಬಳಿ ಬೇಟೆಗಾರನ ವಶಕ್ಕೆ ಪಡೆಯಲಾಗಿದೆ.
ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ಹುಲಿ ಬೇಟೆಯಾಡಲಾಗಿತ್ತು. ಆರೋಪಿ ಪಿರಿಯಾಪಟ್ಟಣದ ಚೌತಿ ಗ್ರಾಮದ ಗೋವಿಂದೇಗೌಡ ಅರಣ್ಯ ಸಿಬ್ಬಂದಿಗಳ ವಶಕ್ಕೆ ಪಡೆಯಲಾಗಿದೆ. ಬೈಕ್ ಮೂಲಕ ಹುಲಿ ಚರ್ಮ ಸಾಗಿಸಲಾಗುತ್ತಿತ್ತು. ಆಗ ಆರೋಪಿ ಬಂಧನವಾಗಿದೆ.