Publish Date: Thu, 27 Sep 2018 (14:35 IST)
Updated Date: Thu, 27 Sep 2018 (14:44 IST)
ಮನೆಯಂಗಳದಲ್ಲಿ ನಿಲ್ಲಿಸಿರುವ ದುಬಾರಿ ಬೆಲೆಯ ಬೈಕ್ ಮತ್ತು ಬುಲೆಟ್ ಗಳನ್ನು ಕಳವು ಮಾಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಪೋಲಿಸರಾದ ಸಿ.ಪಿ.ಐ ಚೆಲುವರಾಜ್, ಪಿ.ಎಸ್.ಐ ಸಂತೋಷ್ ಕಾಯ್ಕಿಣಿ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೈಕ್ ಕಳ್ಳರು ಮನೆಯಂಗಳದಲ್ಲಿ ನಿಲ್ಲಿಸಿರುವ ದುಬಾರಿ ಬೆಲೆಯ ಬೈಕ್ ಮತ್ತು ಬುಲೆಟ್ ಗಳನ್ನು ಕಳ್ಳತನ ಮಾಡುತ್ತಿದ್ದರು.
ಬಂಧಿತರಾದ ಸಿದ್ದಾಪುರ ಮೂಲದ ಮುಸ್ತಾಫ ಮತ್ತು ಜೋನ್ ಇಬ್ಬರು ಬೈಕ್ ಕಳವು ಮಾಡಿದನ್ನು ನಿಯಾಜ್ ಎನ್ನುವನಿಗೆ ಮಾರಾಟ ಮಾಡುತ್ತಿದ್ದರು. ಬೈಕ್ ಗಳನ್ನು ರಾಜ್ಯದ ಬೇರೆ ಬೇರೆ ಭಾಗಗಳಿಗೆ ಮತ್ತು ಅಗತ್ಯವಿದ್ದಲ್ಲಿ ಹೊರರಾಜ್ಯಗಳಿಗೂ ಸಾಗಿಸುತ್ತಿದ್ದ ಎನ್ನುವ ವಿಷಯ ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.