Publish Date: Mon, 24 Sep 2018 (16:38 IST)
Updated Date: Mon, 24 Sep 2018 (16:41 IST)
ಪ್ರಶಾಂತ್ ಪೂಜಾರಿ ಹತ್ಯೆ ಆರೋಪಿ ಇಮ್ತಿಯಾಜ್ ಗಂಟಲ್ ಕಟ್ಟೆ ಹತ್ಯೆಯತ್ನ ನಡೆದಿದೆ. ದ.ಕ ಜಿಲ್ಲೆಯ ಮಂಗಳೂರು ತಾಲೂಕಿನ ಮೂಡಬಿದ್ರೆಯ ಗಂಟಲ್ ಕಟ್ಟೆಯಲ್ಲಿ ಘಟನೆ ನಡೆದಿದೆ.
ಪ್ರಶಾಂತ್ ಪೂಜಾರಿ ಹತ್ಯೆ ಆರೋಪಿ ಇಮ್ತಿಯಾಜ್ ಗಂಟಲ್ ಕಟ್ಟೆ ಹತ್ಯೆಯತ್ನ ನಡೆದಿದೆ. ಬೆಳಿಗ್ಗೆ ತನ್ನ ಹೊಟೇಲ್ ತೆರೆಯುತ್ತಿದ್ದ ವೇಳೆ ತಲವಾರು ಬೀಸಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. 2015 ಅಕ್ಟೋಬರ್ 09ರಂದು ನಡೆದಿದ್ದ ಭಜರಂಗದಳದ ಪ್ರಶಾಂತ್ ಪೂಜಾರಿ ಹತ್ಯೆ ಆರೋಪಿ ಮೇಲೆ ಈಗ ದಾಳಿ ನಡೆದಿದೆ.
ಪ್ರಶಾಂತ್ ಹತ್ಯೆ ಮಾದರಿಯಲ್ಲೇ ಇಮ್ತಿಯಾಜ್ ಮೇಲೆ ದಾಳಿ ನಡೆಸಿದ ತಂಡದ ಸದಸ್ಯರು ಪರಾರಿಯಾಗಿದ್ದಾರೆ. ಪ್ರಾಣಾಪಾಯದಿಂದ ಪಾರಾದ ಇಮ್ತಿಯಾಜ್ ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ. ಮೂಡಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.