Select Your Language

Notifications

webdunia
webdunia
webdunia
webdunia

ನಟ ದರ್ಶನ್ ಗುಣಮುಖರಾಗಲಿ ಎಂದು ಅಭಿಮಾನಿಗಳಿಂದ ವಿಶೇಷ ಪೂಜೆ

ನಟ ದರ್ಶನ್ ಗುಣಮುಖರಾಗಲಿ ಎಂದು ಅಭಿಮಾನಿಗಳಿಂದ ವಿಶೇಷ ಪೂಜೆ
ದಾವಣಗೆರೆ , ಸೋಮವಾರ, 24 ಸೆಪ್ಟಂಬರ್ 2018 (16:10 IST)
ಅಪಘಾತದಲ್ಲಿ ಗಾಯಗೊಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಆದಷ್ಟು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ದಾವಣಗೆರೆಯಲ್ಲಿ ದರ್ಶನ್ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು. ನಟ ದರ್ಶನ್ ಕಾರು ಅಪಘಾತವಾಗಿದ್ದು, ಪ್ರಾಣಾಪಾಯದಿಂದ ದರ್ಶನ್ ಪಾರಾಗಿದ್ದಾರೆ. ಬೇಗ ಗುಣಮುಖರಾಗಿ ಆದಷ್ಟು ಬೇಗ ಚಾಲೆಂಜಿಂಗ್ ಸ್ಟಾರ್ ಚೇತರಿಸಿಕೊಳ್ಳಲಿ ಅಂತಾ ದರ್ಶನ್ ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸಿದರು.

ದರ್ಶನ್ ಬೇಗ ಗುಣಮುಖರಾಗಲೆಂದು ನಗರದ ಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅಭಿಮಾನಿಗಳು, ಸ್ಯಾಂಡಲ್ ವುಡ್ ಬಾಕ್ಸ್ ಆಫ್ ಸುಲ್ತಾನ್ ನ ಕಾರು ಅಪಘಾತವಾದ ವಿಷಯ ಕೇಳಿ ಆಘಾತವಾಗಿತ್ತು. ಈಗ ದರ್ಶನ್ ಅರಾಮಾಗಿರುವುದು ಒಳ್ಳೆಯ ಸುದ್ದಿ. ಬೇಗ ಗುಣಮುಖರಾಗಿ ಶೂಟಿಂಗ್ ನಲ್ಲಿ ದರ್ಶನ್ ತೊಡಗಿಸಿಕೊಳ್ಳುವಂತಾಗಬೇಕು ಎಂದು ಲಿಂಗೇಶ್ವರನಲ್ಲಿ  ದರ್ಶನ್ ತೂಗುದೀಪ ಅಭಿಮಾನಿ ಸಂಘದ ಮುಖಂಡ ಚಂದ್ರು ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಯಿತು.

 

Share this Story:

Follow Webdunia kannada

ಮುಂದಿನ ಸುದ್ದಿ

ದೇನಾ-ವಿಜಯಾ ಬ್ಯಾಂಕ್ ವಿಲೀನಕ್ಕೆ ರೈ ವಿರೋಧ