Select Your Language

Notifications

webdunia
webdunia
webdunia
webdunia

ಉದ್ಯೋಗ ಆಮಿಷವೊಡ್ಡಿ ಹುಡುಗಿಯರನ್ನು ವೇಶ್ಯಾವಾಟಿಕೆ ಜಾಲಕ್ಕೆ ನೂಕುತ್ತಿದ್ದ ಇಬ್ಬರ ಬಂಧನ

ಉದ್ಯೋಗ ಆಮಿಷವೊಡ್ಡಿ ಹುಡುಗಿಯರನ್ನು ವೇಶ್ಯಾವಾಟಿಕೆ ಜಾಲಕ್ಕೆ ನೂಕುತ್ತಿದ್ದ ಇಬ್ಬರ ಬಂಧನ
ಬೆಂಗಳೂರು , ಮಂಗಳವಾರ, 25 ಸೆಪ್ಟಂಬರ್ 2018 (07:18 IST)
ಬೆಂಗಳೂರು : ಹೊರರಾಜ್ಯದಿಂದ ಬಂದ ಹುಡುಗಿಯರಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ ನಂತರ ವೇಶ್ಯಾವಾಟಿಕೆ ಜಾಲಕ್ಕೆ ನೂಕುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.


ತಾಹೀರ್ ಅಹಮದ್ ಹಾಗೂ ಕೆ.ಪಿ. ರಘು ಬಂಧಿತ ಆರೋಪಿಗಳಾಗಿದ್ದು, ಇವರು ಮಡಿವಾಳದಲ್ಲಿ ಬಾಡಿಗೆ ಮನೆ ಪಡೆದುಕೊಂಡು ಹೊರರಾಜ್ಯದ ಯುವತಿಯರಿಗೆ ಕರೆ‌ ಮಾಡಿ ಕೆಲಸ‌‌‌ ನೀಡುವುದಾಗಿ ನಂಬಿಸಿ ನಗರಕ್ಕೆ ಕರೆ ತರುತ್ತಿದ್ದರು. ಬಳಿಕ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಸಿಕೊಂಡರೆ‌ ಕೈತುಂಬಾ ಹಣ ಸಂಪಾದನೆ‌ ಮಾಡಿಕೊಳ್ಳಬಹುದೆಂದು ಆಮಿಷ ಒಡ್ಡಿ ವೇಶ್ಯಾವಾಟಿಕೆ ಜಾಲಕ್ಕೆ ನೂಕುತ್ತಿದ್ದರು.


ಈ ಪ್ರಕರಣದ ಬಗ್ಗೆ ಕಾರ್ಯಾಚರಣೆ ನಡೆಸಿದ ಸಿಸಿಬಿ‌ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಹಾಗೂ ಅವರಿಂದ 11 ಸಾವಿರ ರೂ. ನಗದು, ದಂಧೆಗೆ ಬಳಸುತ್ತಿದ್ದ ಮೂರು ಮೊಬೈಲ್​ ಗಳನ್ನು‌ ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಕಾರ್ಯಾಚರಣೆಯಿಂದ ಹೊರ ರಾಜ್ಯದ‌ ಮೂವರು, ಸ್ಥಳೀಯ ಓರ್ವ ಯುವತಿ ಸೇರಿದಂತೆ‌ ನಾಲ್ವರನ್ನು ರಕ್ಷಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಯಡಿಯೂರಪ್ಪ ಬಾಯಿ ದೆವ್ವದ ಬಾಯಿ ಇದ್ದಂತೆ ಎಂದ ಸಚಿವ