ರೆಡ್ ಹ್ಯಾಂಡ್ ಆಗಿ ಹೇಗೆ ಸರಗಳ್ಳ ಸಿಕ್ಕಿಬಿದ್ದ ಗೊತ್ತಾ?

ಗುರುವಾರ, 6 ಡಿಸೆಂಬರ್ 2018 (16:53 IST)
ವಿಳಾಸ ಕೇಳುವ ನೆಪದಲ್ಲಿ ಸರಗಳ್ಳತನಕ್ಕೆ ಯತ್ನಿಸಿದ್ದ ಕಳ್ಳನೊಬ್ಬ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

ರೆಡ್ ಹ್ಯಾಂಡ್ ಆಗಿ ಸರಗಳ್ಳನೊಬ್ಬ ಸಿಕ್ಕಿಬಿದ್ದಿದ್ದಾನೆ. ಮೈಸೂರಿನ ಇ.ಎಸ್.ಐ.  ಆಸ್ಪತ್ರೆ ಬಳಿ ಘಟನೆ ನಡೆದಿದೆ.

ವಿಳಾಸ ಕೇಳುವ ನೆಪದಲ್ಲಿ ಸರಗಳ್ಳತನಕ್ಕೆ ಯತ್ನ ನಡೆಸಿದ್ದಾನೆ.  ಚಂದ್ರಕಲಾ ಎಂಬುವರ ಬಳಿ ಇದ್ದ 60 ಗ್ರಾಂ ಮಾಂಗಲ್ಯ ಸರ ಎಗರಿಸೋಕೆ ಆರೋಪಿ ಮುಂದಾಗಿದ್ದಾನೆ.

ಸರಗಳ್ಳ ಕುತ್ತಿಗೆಗೆ ಕೈ ಹಾಕುತ್ತಿದ್ದಂತೆ ಸರವನ್ನು ಗಟ್ಟಿಯಾಗಿ ಚಂದ್ರಕಲಾ ಹಿಡಿದುಕೊಂಡಿದ್ದಾರೆ. ಆ ಬಳಿಕ ಸ್ಥಳೀಯರ ನೆರವಿನಿಂದ ಚಾಮರಾಜನಗರ ಗಾಜನೂರು ಮನೋಜ್ (35) ಎಂಬ ಆರೋಪಿ ಬಂಧನಕ್ಕೆ ಒಳಗಾಗಿದ್ದಾನೆ. ಈ ಕುರಿತು ವಿವಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅಂಬರೀಶ್ ಸ್ವಗ್ರಾಮದಲ್ಲಿ ತಿಥಿ ಕಾರ್ಯ