ಮೋಜಿಗಾಗಿ ಬೈಕ್ ಕಳ್ಳತನ ಮಾಡುತ್ತಿದ್ದವರ ಬಂಧನ

ಗುರುವಾರ, 6 ಡಿಸೆಂಬರ್ 2018 (13:56 IST)
ಮೋಜು ಮಾಡಲು ಬೈಕ್ಗಳನ್ನು ಕಳವು ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೈಕ್ ಕಳ್ಳತನ ಆರೋಪಿಗಳನ್ನು ಬಂಧಿಸಿರುವ ಬೆಂಗಳೂರಿನ ಮೈಕೋಲೇಔಟ್ ಪೊಲೀಸರು 16 ಲಕ್ಷ ರೂ. ಮೌಲ್ಯದ 21 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.

ಜೆಪಿನಗರದ 2ನೇ ಹಂತದ ಶೇಖ್ ಆಶೀಫ್ ಅಲಿಯಾಸ್ ಕಾಣೆ (20), ಮಾರಿಮುತ್ತು ಅಲಿಯಾಸ್ ಮಾರಿ (22), ಸುಂಕದಕಟ್ಟೆಯ ಸುಮನ್ ಅಲಿಯಾಸ್ ಜಿಗಣೆ (21) ಬಂಧಿತ ಆರೋಪಿಗಳಾಗಿದ್ದಾನೆ. ಬಂಧಿತರಿಂದ 16 ಲಕ್ಷ ಮೌಲ್ಯದ 21 ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಮೋಜುಮಾಡಲು ನಕಲಿ ಕೀ ಬಳಸಿ ಇಲ್ಲವೆ ಹ್ಯಾಂಡಲ್ ಲಾಕ್ ಮುರಿದು ಸ್ಕೂಟರ್ಗಳು, ಬೈಕ್ಗಳನ್ನು ಕಳವು ಮಾಡಿ ಮಾರಾಟ ಮಾಡುತ್ತಿದ್ದರು.

ಆರೋಪಿಗಳ ಬಂಧನದಿಂದ ಹುಳಿಮಾವು 3, ಪರಪ್ಪನ ಅಗ್ರಹಾರ 2, ಮೈಕೋಲೇಔಟ್, ಕೋಣನಕುಂಟೆ, ಜೆಪಿನಗರ, ಸುಬ್ರಮಣ್ಯಪುರ ತಲಾ 1 ಸೇರಿದಂತೆ 17 ದ್ವಿಚಕ್ರವಾಹನಗಳ ಕಳವು ಪ್ರಕರಣಗಳು ಪತ್ತೆಯಾಗಿವೆ.

ಆಗ್ನೇಯ ವಿಭಾಗದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳ ಕಳವು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಮೈಕೋಲೇಔಟ್ ಇನ್ಸ್ಪೆಕ್ಟರ್ ರವಿ ಪ್ರಕಾಶ್ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ವಿಶೇಷ ತಂಡವು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಆರ್ ಟಿ ಇ ಅಡಿ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆಯುವ ಮಕ್ಕಳಿಗೆ ಶಾಕಿಂಗ್ ನ್ಯೂಸ್